ಎಷ್ಟು ದಿನ ಲಾಕ್? ಯಾವುದಕ್ಕೆ ಅನ್ ಲಾಕ್? ಇದೀಗ 5ಗಂಟೆಗೆ ಸಿಎಂ ಮಹತ್ವದ ಸುದ್ದಿಗೋಷ್ಠಿ

💥ಎಷ್ಟು ದಿನ ಲಾಕ್? ಯಾವುದಕ್ಕೆ ಅನ್ ಲಾಕ್? ಇದೀಗ 5ಗಂಟೆಗೆ ಸಿಎಂ ಮಹತ್ವದ ಸುದ್ದಿಗೋಷ್ಠಿ 

ರಾಜ್ಯದಲ್ಲಿ ಕೋವಿಡ್ ಸೋಂಕು ನಿಯಂತ್ರಣ ಮಾಡುವ ಕಾರಣದಿಂದ ಸರ್ಕಾರ ಲಾಕ್ ಡೌನ್ ಮಾಡಿದೆ. ಸದ್ಯ ಜೂ.7ರವರೆಗೆ ಲಾಕ್ ಡೌನ್ ಮಾಡಲಾಗಿದೆ. ಮತ್ತೆ ಲಾಕ್ ಡೌನ್ ವಿಸ್ತರಿಸುವ ಕುರಿತು ಸಿಎಂ ಬುಧವಾರ ಸುಳಿವು ನೀಡಲಾಗಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಸಂಜೆ ಸುದ್ದಿಗೋಷ್ಠಿ ಕರೆದಿದ್ದಾರೆ. ಸಂಜೆ 5 ಗಂಟೆಗೆ ಸುದ್ದಿಗೋಷ್ಠಿ ಕರೆದಿದ್ದು, ಲಾಕ್ ಡೌನ್ ಕುರಿತಂತೆ ಮಹತ್ವದ ಮಾಹಿತಿ ನೀಡುವ ಸಾಧ್ಯತೆಯಿದೆ.

ಇದೇ ವೇಳೆ ಸಿಎಂ ಎರಡನೇ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆಯೂ ಇದೆ. ಈ ಹಿಂದೆ 1250 ಕೋಟಿ ರೂ. ಗಾತ್ರದ ಕೋವಿಡ್ ಪ್ಯಾಕೇಜ್ ಘೋಷಣೆ ಮಾಡಿದ್ದರು. ಎರಡನೇ ಪ್ಯಾಕೇಜ್ ಗೆ ನಮ್ಮನ್ನೂ ಸೇರಿಸಿ ಎಂದು ಹಲವು ವರ್ಗಗಳು ಸಿಎಂ ಗೆ ಮನವಿ ಮಾಡಿದೆ. ಬಹುತೇಕ ಒಂದು ವಾರ ಲಾಕ್ ಡೌನ್ ವಿಸ್ತರಣೆ ಆಗಲಿದೆ ಎನ್ನಲಾಗಿದೆ.

ಆದರೆ ಇದೇ ವೇಳೆ ಹಲವು ವಲಯಗಳಿಗೆ ವಿನಾಯತಿ ನೀಡುವ ಸಾಧ್ಯತೆಯಿದೆ. ರಫ್ತು ವಲಯಕ್ಕೆ ಈಗಾಗಲೇ ವಿನಾಯತಿ ನೀಡಿದ್ದು, ಇನ್ನೂ ಕೆಲವು ವಲಯಗಳಿಗೆ ಅನ್ ಲಾಕ್ ಮಾಡುವ ಸಾಧ್ಯತೆಯಿದೆ.
_______________________________

Previous Post Next Post