ಪ. ಬಂಗಾಳದ ಮುಖ್ಯಕಾರ್ಯದರ್ಶಿ ಸ್ಥಾನದಿಂದ ನಿವೃತ್ತರಾಗಿ, ಮಮತಾರ ಮುಖ್ಯ ಸಲಹೆಗಾರನಾಗಿ ನೇಮಕಗೊಂಡ ಬಂದೋಪಾಧ್ಯಾಯ

ಪ. ಬಂಗಾಳದ ಮುಖ್ಯಕಾರ್ಯದರ್ಶಿ ಸ್ಥಾನದಿಂದ ನಿವೃತ್ತರಾಗಿ, ಮಮತಾರ ಮುಖ್ಯ ಸಲಹೆಗಾರನಾಗಿ ನೇಮಕಗೊಂಡ ಬಂದೋಪಾಧ್ಯಾಯ

ಕೋಲ್ಕತ್ತ: ನಾನು ಯಾವುದೇ ಕಾರಣಕ್ಕೂ ಆಲಾಪನ್‌ ಬಂದೋಪಾಧ್ಯಾಯರನ್ನು ದಿಲ್ಲಿಗೆ ಕಳುಹಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಗೆ ಮಮತಾ ಬ್ಯಾನರ್ಜಿ ಪತ್ರ ಬರೆದ ಬೆನ್ನಲ್ಲೇ, ಆಲಾಪನ್‌ ಬಂದೋಪಾಧ್ಯಾಯ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಸ್ಥಾನದಿಂದ ನಿವೃತ್ತರಾಗಿದ್ದಾರೆ, ಅವರನ್ನು ಮುಖ್ಯಮಂತ್ರಿಯ ಮುಖ್ಯ ಸಲಹೆಗಾರರಾಗಿ ನೇಮಿಸಲಾಗಿದೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳವು ಕೋವಿಡ್‌ ನಿರ್ವಹಣೆ ಮಾಡುತ್ತಿರುವ ಸಂದರ್ಭದಲ್ಲಿ, ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಬಂದೋಪಾಧ್ಯಾಯರನ್ನು ಯಾವುದೇ ಕಾರಣಕ್ಕೂ ದಿಲ್ಲಿಗೆ ಕಳಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಬಂದೋಪಾಧ್ಯಾಯರ ನಿವೃತ್ತಿಯ ಬಳಿಕ ಹರಿಕೃಷ್ಣ ದ್ವಿವೇದಿ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆಂದು ಮಮತಾ ಘೋಷಿಸಿದ್ದಾರೆ.

"ಅವರು (ಕೇಂದ್ರ) ಯಾವುದೇ ಕಾರಣ ನೀಡಲಿಲ್ಲ. ನನಗೆ ಆಘಾತವಾಗಿದೆ. ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಆಲಾಪನ್‌ ರ ಸೇವೆಯ ಅಗತ್ಯ ಪಶ್ಚಿಮ ಬಂಗಾಳಕ್ಕಿದೆ. ಕೋವಿಡ್‌ ಮತ್ತು ಯಾಸ್‌ ಚಂಡಮಾರುತದ ಈ ವಿಷಮ ಸಂದರ್ಭದಲ್ಲಿ ಅವರ ಸೇವೆಯ ಅಗತ್ಯವಿದೆ" ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
_______________________________
📡
Previous Post Next Post