ರಾಜ್ಯದಲ್ಲಿ ಇಂದು 6455 ಜನರು ಗುಣಮುಖರು, 4436 ಜನರಿಗೆ ಪಾಸಿಟಿವ್ , ಇಂದಿನ ಪಾಸಿಟಿವಿಟಿ ದರ 2.59%

ರಾಜ್ಯದಲ್ಲಿ ಇಂದು 6455 ಜನರು ಗುಣಮುಖರು,  4436 ಜನರಿಗೆ ಪಾಸಿಟಿವ್ , ಇಂದಿನ ಪಾಸಿಟಿವಿಟಿ ದರ 2.59%


ಬೆಂಗಳೂರು : ರಾಜ್ಯದಲ್ಲಿ 24 ಗಂಟೆಯಲ್ಲಿ ಹೊಸದಾಗಿ ಬೆಂಗಳೂರು ನಗರದಲ್ಲಿ 1008 ಜನರು ಸೇರಿದಂತೆ ರಾಜ್ಯಾಧ್ಯಂತ 4436 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಅಲ್ಲದೇ ಸೋಂಕಿತರಾದಂತ 123 ಜನರು ಸಾವನ್ನಪ್ಪಿದ್ದಾರೆ.


ಈ ಕುರಿತು ಆರೋಗ್ಯ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ ಬೆಂಗಳೂರು ನಗರದಲ್ಲಿ 1008 ಜನರು ಸೇರಿದಂತೆ ರಾಜ್ಯಾಧ್ಯಂತ 4,436 ಜನರಿಗೆ ಹೊಸದಾಗಿ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಇವರಲ್ಲಿ ಇಂದು 6455 ಜನರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ 1,16,450 ಸಕ್ರೀಯ ಸೋಂಕಿತರು ಇರುವುದಾಗಿ ತಿಳಿಸಿದೆ.


ಜಿಲ್ಲಾವಾರು ಪ್ರಕರಣಗಳು :

ಬಾಗಲಕೋಟೆ-9, ಬಳ್ಳಾರಿ-42, ಬೆಳಗಾವಿ-179, ಬೆಂಗಳೂರು ಗ್ರಾಮಾಂತರ-125, ಬೆಂಗಳೂರು ನಗರ-1008, ಬೀದರ್-1, ಚಾಮರಾಜನಗರ-89, ಚಿಕ್ಕಬಳ್ಳಾಪುರ-103, ಚಿಕ್ಕಮಗಳೂರು-163,ಚಿತ್ರದುರ್ಗ-57, ದಕ್ಷಿಣ ಕನ್ನಡ-538, ದಾವಣಗೆರೆ-119, ಧಾರವಾಡ-90, ಗದಗ-15, ಹಾಸನ-301, ಹಾವೇರಿ-24,ಕಲಬುರಗಿ-41, ಕೊಡಗು-152, ಕೋಲಾರ-92, ಕೊಪ್ಪಳ-32, ಮಂಡ್ಯ-110, ಮೈಸೂರು-499, ರಾಯಚೂರು-21, ರಾಮನಗರ-26, ಶಿವಮೊಗ್ಗ-219, ತುಮಕೂರು-126, ಉಡುಪಿ-135, ಉತ್ತರ ಕನ್ನಡ-104, ವಿಜಯಪುರ-7, ಯಾದಗಿರಿ-9.


ಸೂಚನೆ - ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಇದು ‌ಈಗಿನ ಸುದ್ದಿಯ ಕಳಕಳಿ

Previous Post Next Post