ರಾಜ್ಯದಲ್ಲಿ ಕಡಿಮೆಯಾದ ಕೊರೊನ, ಪಾಸಿಟಿವ್ ದರ ಭಾರೀ ಇಳಿಕೆ, ಶೆ. 7.71 ಕ್ಕೆ ಕುಸಿದ ಪಾಸಿಟಿವಿಟಿ

ರಾಜ್ಯದಲ್ಲಿ ಕಡಿಮೆಯಾದ ಕೊರೊನ, ಪಾಸಿಟಿವ್ ದರ ಭಾರೀ ಇಳಿಕೆ, ಶೆ. 7.71 ಕುಸಿದ ಪಾಸಿಟಿವಿಟಿ 


ಬೆಂಗಳೂರು: ಕಳೆದ 24 ಗಂಟೆಯ ಅವಧಿಯಲ್ಲಿ ರಾಜ್ಯದಲ್ಲಿ 12,209 ಮಂದಿಗೆ ಹೊಸದಾಗಿ ಕೊರೋನಾ ಪಾಸಿಟಿವ್ ವರದಿ ಬಂದಿದೆ.


ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇಕಡ 7.71 ರಷ್ಟು ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 10,224 ಜನ ಗುಣಮುಖರಾಗಿದ್ದು, ರಾಜ್ಯದಲ್ಲಿ ಇವತ್ತು 25,659 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿರುವ ಸಕ್ರಿಯ ಪ್ರಕರಣಗಳ ಸಂಖ್ಯೆ 2,54,505


ಶುಕ್ರವಾರ ಶೇಕಡ 10.66 ರಷ್ಟು ಪಾಸಿಟಿವಿಟಿ ದರ ಇತ್ತು. ಕಳೆದ ಏಪ್ರಿಲ್ 15 ರ ನಂತರ ನಿನ್ನೆ ಮೊದಲ ಬಾರಿಗೆ ಪಾಸಿಟಿವಿಟಿ ದರ ಶೇಕಡ ಶೇಕಡ 10 ಕ್ಕಿಂತ ಕಡಿಮೆಯಾಗಿ, ಇಂದು 7.71 ರಷ್ಟು ಇಳಿಕೆಯಾಗಿದೆ.


ಪಾಸಿಟಿವಿಟಿ ದರ ಕಡಿಮೆಯಾದ್ರೆ ಅನ್ಲಾಕ್ ಮಾಡುವುದಾಗಿ ಸಿಎಂ ಹೇಳಿದ್ದು, ಈಗ ಪಾಸಿಟಿವಿಟಿ ದರ ಕಡಿಮೆಯಾಗುತ್ತಿರುವುದರಿಂದ ಲಾಕ್ ಡೌನ್ ಹಂತ ಹಂತವಾಗಿ ತೆರವುಗೊಳ್ಳುವ ಸಾಧ್ಯತೆ ಇದೆ.
Previous Post Next Post