ದೇಶದಲ್ಲಿ ಇಳಿಕೆ ಕಂಡ ಕೊರೊನ, ಭಾರತದಲ್ಲಿಂದು 86,498 ಕೇಸ್ ಪತ್ತೆ, 1,82,282 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರು
ನವದೆಹಲಿ : ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಇಳಿಕೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 86,498 ಜನರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 86,498 ಜನರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 2123 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಇನ್ನು ಕಳೆದ 24 ಗಂಟೆಯಲ್ಲಿ 1,82,282 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಸದ್ಯ ದೇಶದಲ್ಲಿ 13,03,702 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಒಟ್ಟು ಪ್ರಕರಣಗಳು: 2,89,96,473
ಒಟ್ಟು ಡಿಸ್ಚಾರ್ಜ್ ಗಳು: 2,73,41,462
ಸಾವಿನ ಸಂಖ್ಯೆ: 3,51,309
ಸಕ್ರಿಯ ಪ್ರಕರಣಗಳು: 13,03,702
ಹೆಚ್ಚಿನ ಸುದ್ದಿಗಾಗಿ Click here
ತನ್ನವರನ್ನು ಬಿಟ್ಟು ತೆರಳುವ ಹಾಗಾಗಿದೆ, ಮೈಸೂರಿಗೆ ಧನ್ಯವಾದ ಹೇಳಿ ಸುದ್ದಿಗಾರರ ಮುಂದೆ ಭಾವುಕರಾದ ರೋಹಿಣಿ ಸಿಂಧೂರಿ
ಮೈಸೂರು: ಮೈಸೂರಿನ ಜನತೆ ಸಾಕಷ್ಟು ಪ್ರೀತಿ ತೋರಿಸಿ ನನ್ನನ್ನು ಮನೆ ಮಗಳಂತೆ ನೋಡಿಕೊಂಡಿದ್ದಾರೆ. ಇಲ್ಲಿ ನನಗೆ ತವರೂರಿನ ಭಾವನೆ ಮೂಡಿದೆ. ಇಂದು ತವರನ್ನು ಬಿಟ್ಟು ತೆರಳುವ ಹಾಗಾಗಿದೆ. ಥ್ಯಾಂಕ್ಯೂ ಮೈಸೂರು. ಎಂದು ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮೈಸೂರಿನಲ್ಲಿ ಸೋಮವಾರದಂದು ಭಾವುಕರಾದರು.
ರಾಜಕೀಯ ಕೆಸರೆರಚಾಟಕ್ಕೆ ಕಳೆದ ಕೆಲವು ಸಮಯಗಳಿಂದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಾರಣರಾಗಿದ್ದರು. ಎಲ್ಲಾ ಪಕ್ಷಗಳ ಮುಖಂಡರು ಜಿಲ್ಲಾಧಿಕಾರಿಯ ಖಡಕ್ ರೂಲ್ಸ್ ಗೆ ಕಸಿವಿಸಿಗೊಂಡು ರೋಹಿಣಿ ಸಿಂಧೂರಿಯವರ ವಿರುದ್ಧ ಧ್ವನಿಯೆತ್ತಿದ್ದರು. ಕೊನೆಯ ಹಂತದಲ್ಲಿ ಪಾಲಿಕೆ ಕಮಿಷನರ್ ಜೊತೆಗೂ ಬಹಿರಂಗ ವಾಗ್ವಾದ ನಡೆದಿದ್ದು, ವರ್ಗಾವಣೆಗೆ ಹಾದಿ ಸುಗಮವಾಗಿತ್ತು. ನಿನ್ನೆ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರ್ಗಾವಣೆಯನ್ನು ನಾನು ನಿರೀಕ್ಷೆ ಮಾಡಿರಲಿಲ್ಲ.
ಆದರೆ ಖಡಕ್ ಆದೇಶದ ಮೂಲಕ ಒಳ್ಳೆಯ ಕೆಲಸ ಮಾಡುವಂಥ ಸಂದರ್ಭದಲ್ಲಿ ದಿಢೀರನೆ ಈ ಬೆಳವಣಿಗೆ ನಡೆದಿದೆ ಎಂದು ಭಾವುಕರಾಗಿದ್ದಾರೆ. ನೂತನ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರನ್ನು ಭೇಟಿಯಾಗಿ ಶುಭಾಶಯ ಕೋರಿದ್ದಾರೆ