ನಾಯಕತ್ವ ಬದಲಾಬಣೆ ಕೂಗು: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಆಗಮನ, ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ ಬಿಜೆಪಿ 'ಬಣ' ಜಗಳ
ರಾಜ್ಯ ಉಸ್ತುವಾರಿ ಎದುರೇ ಸ್ಫೋಟಗೊಳ್ಳುತ್ತಾ ಕಮಲದ ಬಿಕ್ಕಟ್ಟು?? ಇಂದು ಸಂಜೆ ಅರುಣ್ ಸಿಂಗ್ ಸಚಿವರೊಂದಿಗೆ ಸೀಕ್ರೆಟ್ ಸಭೆ
ರಾಜ್ಯ ಬಿಜೆಪಿ ಬಿಕ್ಕಟ್ಟಿಗೆ ಪರಿಹಾರ ಸಿಗುತ್ತಾ ಅನ್ನೊ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. . ಇಂದು ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಲಿದ್ದು, ಮೂರು ದಿನಗಳ ಕಾಲ ಶಾಸಕರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಇಂದು ಸಂಜೆ ಸಚಿವರೊಂದಿಗೆ ಚರ್ಚೆ ನಡೆಸುವ ಅರುಣ್ ಸಿಂಗ್, ನಾಳೆ ಇಡೀ ದಿನ ಶಾಸಕರೊಂದಿಗೆ ಸಭೆ ಮಾಡಲಿದ್ದಾರೆ.
ಶುಕ್ರವಾರ ವಿವಿಧ ಮೋರ್ಚಾಗಳ ಅಧ್ಯಕ್ಷರೊಂದಿಗೆ ಸಭೆ ಹಾಗು ಸಮನ್ವಯ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅರುಣ್ ಸಿಂಗ್ ಜೊತೆ ಚರ್ಚೆಗೆ 20ಕ್ಕು ಹೆಚ್ಚು ಶಾಸಕರು ನೋಂದಣಿ ಮಾಡಿಕೊಂಡಿದ್ದಾರಂತೆ. ಶಾಸಕರಿಗೆ ಗುಂಪುಗುಂಪಾಗಿ ಭೇಟಿ ಮಾಡುವಂತಿಲ್ಲ ಎಂದು ತಿಳಿಸಲಾಗಿದೆಯಂತೆ.
ಅರುಣ್ ಸಿಂಗ್ ಜೊತೆ ಭೇಟಿ ಹಾಗೂ ಚರ್ಚೆಗೆ ಪ್ರತಿಯೊಬ್ಬ ಶಾಸಕರಿಗೂ ಪ್ರತ್ಯೇಕ ಸಮಯ ನಿಗದಿ ಮಾಡಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ನೇತೃತ್ವದಲ್ಲಿ ಶಾಸಕರು ಜೂನ್ 17 ರಂದು ಅರುಣ್ ಸಿಂಗ್ ಭೇಟಿ ಮಾಡಿ ಒಗ್ಗಟ್ಟು ಪ್ರದರ್ಶನ ಮಾಡಲಿದ್ದಾರೆ. ಈ ಬಗ್ಗೆ ರೇಣುಕಾಚಾರ್ಯ ಮಾಹಿತಿ ನೀಡಿದ್ದಾರೆ.
ಅರುಣ್ ಸಿಂಗ್ ಈಗಾಗಲೇ ಯಡಿಯೂರಪ್ಪನವರೇ ನಮ್ಮ ನಾಯಕ ಎಂದಿದ್ದರು. ಹಾಗಿದ್ದರೂ ಕೆಲವರು ನಾಯಕತ್ವ ವಿಚಾರವನ್ನು ಎಳೆದು ತರುತ್ತಿದ್ದಾರೆ. ಹೀಗಾಗಿ ಒಗ್ಗಟ್ಟು ಪ್ರದರ್ಶಿಸುತ್ತೇವೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
Click Here