ದೇಶದಲ್ಲಿ ಇಳಿದ ಕೊರೊನ ಅಬ್ಬರ, ಕಳೆದ 24 ಗಂಟೆಯಲ್ಲಿ 62,224 ಕೋವಿಡ್ ಪ್ರಕರಣಗಳು ಪತ್ತೆ, 1,07,628 ಮಂದಿ ಗುಣಮುಖರಾಗುವುದರೊಂದಿಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್

ದೇಶದಲ್ಲಿ ಇಳಿದ ಕೊರೊನ ಅಬ್ಬರ, ಕಳೆದ 24 ಗಂಟೆಯಲ್ಲಿ 62,224 ಕೋವಿಡ್ ಪ್ರಕರಣಗಳು ಪತ್ತೆ,  1,07,628 ಮಂದಿ ಗುಣಮುಖ ರಾಗುವುದರೊಂದಿಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್

ನವದೆಹಲಿ: 
ಭಾರತದಲ್ಲಿ ಕೋವಿಡ್ ಎರಡನೇ ಅಲೆ ತೀವ್ರವಾಗಿ ಇಳಿಕೆಯಾಗುತ್ತಿದ್ದು, ಕಳೆದ 24ಗಂಟೆಯಲ್ಲಿ 62,224 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 2,542 ಮಂದಿ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ(ಜೂ.16) ಬಿಡುಗಡೆ ಮಾಡಿರುವ ಅಂಕಿಅಂಶ ತಿಳಿಸಿದೆ. ಈ ನಡುವೆ ಕಳೆದ 24 ಗಂಟೆಗಳಲ್ಲಿ 1,07,628 ಮಂದಿ ಗುಣಮುಖರಾಗುವುದರೊಂದಿಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.


ದೇಶದ ಐದು ರಾಜ್ಯಗಳಲ್ಲಿ ಗರಿಷ್ಠ ಪ್ರಮಾಣದ ಕೋವಿಡ್ ಸೋಂಕು ಪ್ರಕರಣ ವರದಿಯಾಗಿದೆ. ಇದರಲ್ಲಿ ಕೇರಳದಲ್ಲಿ 12,246 ಕೋವಿಡ್ ಪ್ರಕರಣ, ತಮಿಳುನಾಡು 11,805, ಮಹಾರಾಷ್ಟ್ರ 7652, ಆಂಧ್ರಪ್ರದೇಶ 5,741 ಹಾಗೂ ಕರ್ನಾಟಕದಲ್ಲಿ 5041 ಪ್ರಕರಣಗಳು ಪತ್ತೆಯಾಗಿದೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸತತವಾಗಿ ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಪಾಸಿಟಿವಿಟಿ ದರ ಶೇ.5ಕ್ಕಿಂತ ಕೆಳಕ್ಕೆ ಇಳಿದಿದ್ದು, ದಿನಂಪ್ರತಿಯ ಪಾಸಿಟಿವಿಟಿ ದರ ಶೇ.3.22ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ವಿವರಿಸಿದೆ.


ದೇಶದಲ್ಲಿ ದೈನಂದಿನ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿರುವ ನಡುವಲ್ಲೇ ಸಕ್ರಿಯ ಪ್ರಕರಣಗಳ ಸಂಖ್ಯೆ 8,65,432ಕ್ಕೆ ಇಳಿಕೆಯಾಗಿದೆ.


ಸೂಚನೆ: ಮಹಾಮಾರಿಯ ಕೊಂಡಿ ಕಳಚಲು ಕೈಜೋಡಿಸೋಣ, ಸಾಮಾಜಿಕ ಅಂತರವಿರಲಿ, ಮಾಸ್ಕ್ ಧರಿಸಿ
Previous Post Next Post