ದಕ್ಷಿಣ ಕನ್ನಡದಲ್ಲಿ ಖಾಸಗಿ ಮತ್ತು ಸಿಟಿ ಬಸ್ ಗಳ ಓಡಾಟ ಆರಂಭ

ದಕ್ಷಿಣ ಕನ್ನಡದಲ್ಲಿ ಖಾಸಗಿ ಮತ್ತು ಸಿಟಿ ಬಸ್ ಗಳ ಓಡಾಟ ಆರಂಭ


ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದಿನಿಂದ (ಜುಲೈ 1)ಖಾಸಗಿ ಮತ್ತು ಸಿಟಿ ಬಸ್ ಗಳ ಓಡಾಟ ಆರಂಭಗೊಂಡಿದೆ.


ಕೋವಿಡ್ ಲಾಕ್ ಡೌನ್ ಕಾರಣದಿಂದ ಸುಮಾರು 2 ತಿಂಗಳ ಸ್ಥಗಿತಗೊಂಡಿದ್ದ ಬಸ್ ಸೇವೆ ಇಂದಿನಿಂದ ಆರಂಭಗೊಂಡಿದೆ. ಮೊದಲ ಹಂತದಲ್ಲಿ ಸೀಮಿತ ಸಂಖ್ಯೆಯ ಬಸ್ ಗಳು ರಸ್ತೆಗಿಳಿದಿದ್ದು, ಬಹುತೇಕ ಬಸ್ ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು.


ಸಿಟಿ ಬಸ್ ಗಳು ಹ್ಯಾಮಿಲ್ಟನ್ ವೃತ್ತದಿಂದ ರಾವ್ ಆಯಂಡ್ ರಾವ್ ವೃತ್ತ ರಸ್ತೆಯಲ್ಲಿ ನಿಲ್ಲದೆ ಸರ್ವೀಸ್ ಬಸ್ ನಿಲ್ದಾಣವಾಗಿ ಪ್ರವೇಶ ಪಡೆದಿತ್ತು. ಸ್ಥಳದಲ್ಲಿ ಯಾವುದೇ ಗೊಂದಲ ಉಂಟಾಗಬಾರದು ಎಂದು ಬಸ್ ನಿಲ್ದಾಣದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು‌.

Previous Post Next Post