ಇಂದು ರಾಜ್ಯದಲ್ಲಿ 14302 ಡಿಸ್ಚಾರ್ಜ್, 3,203 ಪಾಸಿಟಿವ್
ಕೊರೊನಾದಿಂದಾಗಿ ಇಂದು ಸುಮಾರು 94 ಜನ ಸೋಂಕಿತರು ಬಲಿಯಾಗಿದ್ದು, 14302 ಜನ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಒಟ್ಟು 65312 ಸಕ್ರಿಯ ಪ್ರಕರಣಗಳಿವೆ.
ಪಾಸಿಟಿವ್ ದರ ಇಳಿಕೆ, ದಕ ಜಿಲ್ಲೆಯಲ್ಲಿ ಲಾಕ್ ಡೌನ್ ರಿಲ್ಯಾಕ್ಸ್
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ಕಡಿಮೆಯಾದ ಹಿನ್ನೆಲೆ ಜಿಲ್ಲೆಯ ಜನೆತೆಗೆ ಜಿಲ್ಲಾಡಳಿತ ಬಿಗ್ ರಿಲೀಫ್ ನೀಡಿದ್ದು, , ನಾಳೆಯಿಂದ ಅನ್ವಯವಾಗುವಂತೆ ಪ್ರತಿ ದಿನ ಸಂಜೆ 5 ಗಂಟೆಯವರಿಗೆ ಎಲ್ಲಾ ಅಂಗಡಿಗಳನ್ನು ತೆರೆಯಲು ಹಾಗೂ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿ ದರ ಕಡಿಮೆಯಾದ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆ 'ಪಟ್ಟಿ 1' ರಲ್ಲಿ ಸೇರ್ಪಡೆಯಾಗಿದ್ದು, ನಾಳೆಯಿಂದ ಅನ್ವಯವಾಗುವಂತೆ ಪ್ರತಿ ದಿನ ಸಂಜೆ 5 ಗಂಟೆಯವರಿಗೆ ಎಲ್ಲಾ ಅಂಗಡಿಗಳನ್ನು ತೆರೆಯಲು ಹಾಗೂ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ಆದೇಶ ಜುಲೈ 5 ಮುಂಜಾನೆ 5 ಗಂಟೆಯವರೆಗೆ ಮಾತ್ರ ಜಾರಿಯಲ್ಲಿರಲಿದೆ. ಹಾಗೂ ವಾರಾಂತ್ಯ ಕರ್ಫ್ಯೂ ಜಾರಿಯಾಲ್ಲಿರಲಿದೆ.
ಅನ್ಲಾಕ್ 3.O ಕುರಿತು ನಾಳೆ ಸಿಎಂ ಸಭೆ
ಬೆಂಗಳೂರು : ಲಾಕ್ಡೌನ್ ನಿರ್ಬಂಧ ಸಡಿಲಿಕೆಯ ಅನ್ಲಾಕ್ 2.O ಜುಲೈ 5ಕ್ಕೆ ಅಂತ್ಯಗೊಳ್ಳಲಿದೆ. ಅನ್ಲಾಕ್ 3.O ಕುರಿತು ಕೋವಿಡ್ ಉಸ್ತುವಾರಿ ಸಚಿವರು ಹಾಗು ಹಿರಿಯ ಅಧಿಕಾರಿಗಳ ಜೊತೆ ಸಿಎಂ ಬಿ.ಎಸ್. ಯಡಿಯೂರಪ್ಪ ನಾಳೆ ಮಹತ್ವದ ಸಭೆ ನಡೆಸಲಿದ್ದಾರೆ. ನಾಳೆ ಸಂಜೆ 5.30ಕ್ಕೆ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಕೋವಿಡ್ ಉಸ್ತುವಾರಿ ಸಚಿವರು, ಅಧಿಕಾರಿಗಳ ಜೊತೆ ಸಿಎಂ ಸಮಾಲೋಚನೆ ನಡೆಸಲಿದ್ದಾರೆ.
ಯಾವೆಲ್ಲ ವರ್ಗಕ್ಕೆ ಲಾಕ್ಡೌನ್ ಸಡಲಿಕೆ ಮಾಡಬೇಕು ಎನ್ನುವ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಮಾಲ್ಗಳ ಆರಂಭಕ್ಕೆ ಒತ್ತಡ ಬಂದಿದ್ದು, ಜಿಮ್ಗಳಿಗೆ ನೀಡಿದಂತೆ ಸ್ವಿಮ್ಮಿಂಗ್ ಪೂಲ್ಗಳ ಆರಂಭಕ್ಕೂ ಅವಕಾಶ ನೀಡಬೇಕು ಎಂಬ ಬೇಡಿಕೆ ಬಂದಿದೆ. ಸಿನಿಮಾ ಮಂದಿರಗಳ ಆರಂಭ, ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ, ಚರ್ಚ್, ಮಸೀದಿ ಸೇರಿ ಎಲ್ಲ ವಹಿವಾಟಿಗೆ ಅವಕಾಶ ನೀಡುವ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ.
ಹೆಚ್ಚಿನ ಸುದ್ದಿಗಾಗಿ Click here