ಬ್ಯಾಂಕ್ ಗ್ರಾಹಕರೇ ಗಮನಿಸಿ: ನೀವು ಸಿಂಡಿಕೇಟ್ ಬ್ಯಾಂಕ್ ಗ್ರಾಹಕರಾಗಿದ್ದರೆ ಜುಲೈ ಒಂದರಿಂದ ನಿಮ್ಮ ಐಎಫ್ಎಸ್ಸಿ ಕೋಡ್, ಚೆಕ್ ಪುಸ್ತಕಗಳು ಅಮಾನ್ಯವಾಗಲಿದೆ

ಬ್ಯಾಂಕ್ ಗ್ರಾಹಕರೇ ಗಮನಿಸಿ: ನೀವು ಸಿಂಡಿಕೇಟ್ ಬ್ಯಾಂಕ್ ಗ್ರಾಹಕರಾಗಿದ್ದರೆ ಜುಲೈ ಒಂದರಿಂದ ನಿಮ್ಮ ಐಎಫ್ಎಸ್ಸಿ ಕೋಡ್, ಚೆಕ್ ಪುಸ್ತಕಗಳು ಅಮಾನ್ಯವಾಗಲಿದೆ 

ನೀವು ಸಿಂಡಿಕೇಟ್ ಬ್ಯಾಂಕಿನ ಗ್ರಾಹಕರಾಗಿದ್ದರೆ, ಈ ಸುದ್ದಿ ನಿಮಗೆ ಮುಖ್ಯವಾಗುತ್ತೆ. ಯಾಕಂದ್ರೆ, ಹಿಂದಿನ ಸಿಂಡಿಕೇಟ್ ಬ್ಯಾಂಕ್ ಶಾಖೆಗಳ ಪ್ರಸ್ತುತ ಐಎಫ್ ಎಸ್ ಸಿ ಕೋಡ್ʼಗಳನ್ನ ಜುಲೈ 1ರಿಂದ ನಿಷ್ಕ್ರಿಯಗೊಳಿಸಲಾಗುವುದು ಎಂದು ಕೆನರಾ ಬ್ಯಾಂಕ್ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ. ಅಂದ್ಹಾಗೆ, ಸಿಂಡಿಕೇಟ್ ಬ್ಯಾಂಕ್ ಅನ್ನು ಏಪ್ರಿಲ್ 1, 2020 ರಿಂದ ಜಾರಿಗೆ ಬರುವಂತೆ ಕೆನರಾ ಬ್ಯಾಂಕ್ʼನೊಂದಿಗೆ ವಿಲೀನಗೊಳಿಸಲಾಯಿತು.ಸಿಂಡಿಕೇಟ್ ಬ್ಯಾಂಕನ್ನ ಕೆನರಾ ಬ್ಯಾಂಕ್ʼನೊಂದಿಗೆ ವಿಲೀನ ಮಾಡಿದ ನಂತ್ರ, ಸಿಎನ್ ಬಿಯಿಂದ ಪ್ರಾರಂಭವಾಗುವ ಎಲ್ಲಾ ಸಿಂಡಿಕೇಟ್ ಐಎಫ್ ಎಸ್ ಸಿ ಕೋಡ್ʼಗಳನ್ನು ಬದಲಾಯಿಸಲಾಗಿದೆ. ಸಿಎನ್ ಬಿಯಿಂದ ಪ್ರಾರಂಭವಾಗುವ ಎಲ್ಲಾ ಐಎಫ್ ಎಸ್ ಸಿಯನ್ನು ಡಬ್ಲ್ಯೂ.ಇ.ಎಫ್ 01.07.2021 ನಿಷ್ಕ್ರಿಯಗೊಳಿಸಲಾಗುವುದು' ಎಂದು ಕೆನರಾ ಬ್ಯಾಂಕ್ ತಿಳಿಸಿದೆ. ಅದ್ರಂತೆ, ಸಿಂಡಿಕೇಟ್ ಬ್ಯಾಂಕ್ ಐಎಫ್ ಎಸ್ ಸಿ ಕೋಡ್ʼಗಳು ಜೂನ್ 30, 2021ರವರೆಗೆ ಮಾತ್ರ ಕಾರ್ಯನಿರ್ವಹಿಸುತ್ತವೆ. ಖಾತೆದಾರರು ಹೊಸ ಐಎಫ್ ಎಸ್ ಸಿ ಕೋಡ್ʼಗಳನ್ನ ಪಡೆಯಬೇಕಾಗುತ್ತದೆ ಎಂದು ಬ್ಯಾಂಕ್ ಹೇಳಿದೆ.


'ಹಿಂದಿನ ಸಿಂಡಿಕೇಟ್ ಶಾಖೆಗಳ ಐಎಫ್ ಎಸ್ ಸಿ ಕೋಡ್ ಗಳು ಜುಲೈ 1, 2021 ರಿಂದ ಜಾರಿಗೆ ಬರುವಂತೆ ಬದಲಾಗಲಿವೆ. ಗ್ರಾಹಕರು ಎನ್ ಇಎಫ್ ಟಿ/ಆರ್ ಟಿಜಿಎಸ್/ಐಎಂಪಿಎಸ್ ಮೂಲಕ ಹಣವನ್ನ ಸ್ವೀಕರಿಸಲು ಹೊಸ ಕೆನರಾ ಐಎಫ್ ಎಸ್ ಸಿಯನ್ನು ಬಳಸಬೇಕು' ಎಂದು ಕೆನರಾ ಬ್ಯಾಂಕ್ ಜೂನ್ 11ರಂದು ತಿಳಿಸಿತ್ತು.


'ಹಿಂದಿನ ಸಿಂಡಿಕೇಟ್ ಬ್ಯಾಂಕಿನ ಗ್ರಾಹಕರು ಬದಲಾದ ಐಎಫ್ ಎಸ್ ಸಿ ಮತ್ತು ಎಂಐಸಿಆರ್ ಕೋಡ್ʼಗಳೊಂದಿಗೆ ಹೊಸ ಚೆಕ್ ಪುಸ್ತಕಗಳನ್ನ ಪಡೆಯಬೇಕಾಗುತ್ತದೆ' ಎಂದು ಅದು ಹೇಳಿದೆ.


ಹೆಚ್ಚಿನ ಸುದ್ದಿಗಾಗಿ CLICK HERE

Previous Post Next Post