ರಾಜ್ಯದಲ್ಲಿ ಇಂದು 1,653 ಪಾಸಿಟಿವ್, 2,572 ಡಿಸ್ಚಾರ್ಜ್, ರಾಜ್ಯದಲ್ಲಿ ಇರುವ ಸಕ್ರಿಯ ಪ್ರಕರಣಗಳು 24,695

ರಾಜ್ಯದಲ್ಲಿ ಇಂದು 1,653 ಪಾಸಿಟಿವ್, 2,572 ಡಿಸ್ಚಾರ್ಜ್, ರಾಜ್ಯದಲ್ಲಿ ಇರುವ ಸಕ್ರಿಯ ಪ್ರಕರಣಗಳು 24,695


ಬೆಂಗಳೂರು: ರಾಜ್ಯದಲ್ಲಿ ಗುರುವಾರ 1,653 ಕೋವಿಡ್ ಹೊಸ ಪ್ರಕರಣಗಳು ಪತ್ತೆಯಾಗಿವೆ ಹಾಗೂ 31 ಜನರು ಸೋಂಕಿಗೆ ಬಲಿಯಾಗಿದ್ದಾರೆ. 2,572 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಇನ್ನೂ ಕೂಡ 24,695 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ


ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ -3, ಬಳ್ಳಾರಿ -6, ಬೆಳಗಾವಿ- 60, ಬೆಂಗಳೂರು ಗ್ರಾಮಾಂತರ- 46, ಬೆಂಗಳೂರು ನಗರ- 418, ಚಾಮರಾಜನಗರ- 29, ಚಿಕ್ಕಬಳ್ಳಾಪುರ- 10, ಚಿಕ್ಕಮಗಳೂರು- 64, ಚಿತ್ರದುರ್ಗ -21, ದಕ್ಷಿಣ ಕನ್ನಡ -229, ದಾವಣಗೆರೆ -27, ಧಾರವಾಡ -14, ಗದಗ -3, ಹಾಸನ -97, ಹಾವೇರಿ -2, ಕಲಬುರಗಿ -3, ಕೊಡಗು- 107, ಕೋಲಾರ -21, ಕೊಪ್ಪಳ -2, ಮಂಡ್ಯ -36, ಮೈಸೂರು -134, ರಾಯಚೂರು- 2, ರಾಮನಗರ -3, ಶಿವಮೊಗ್ಗ -87, ತುಮಕೂರು -104, ಉಡುಪಿ -82, ಉತ್ತರ ಕನ್ನಡ -34, ವಿಜಯಪುರ-9, ಯಾದಗಿರಿ-0.ಕೂಡಲೇ ರಾಜ್ಯದ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ 'ಕೋವಿಡೇತರ ಚಿಕಿತ್ಸೆ' ಆರಂಭಿಸಿ: ಆರೋಗ್ಯ ಇಲಾಖೆ ಆದೇಶ 


ಬೆಂಗಳೂರು : ರಾಜ್ಯದಲ್ಲಿನ ಕೋವಿಡ್-19 ಚಿಕಿತ್ಸೆ(Covid-19 Treatment)ಯಲ್ಲಿ ತೊಡಗಿಸಿಕೊಂಡಿದ್ದ ಎಲ್ಲಾ ಹಂತದ ಸರ್ಕಾರಿ ಆಸ್ಪತ್ರೆ(Government Hospitals)ಗಳಲ್ಲಿ ಕೋವಿಡೇತರ ಚಿಕಿತ್ಸೆಗಳನ್ನು ಕೂಡಲೇ ಪುನರ್ ಪ್ರಾರಂಭಿಸುವಂತೆ ಆರೋಗ್ಯ ಇಲಾಖೆ(Health Department) ಆದೇಶಿಸಿದೆ.


ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ರಾಜ್ಯದಲ್ಲಿ 2ನೇ ಅಲೆಯ ಕೋವಿಡ್ ಸೋಂಕು ಮತ್ತು ಸಾವಿನ ಪ್ರಕರಣ ದಿನೇದಿನೇ ಕಡಿಮೆಯಾಗುತ್ತಿದ್ದು, ಸಾಮಾನ್ಯ ಸ್ಥಿತಿಗತಿಯನ್ನು ತಲುಪಲಾಗುತ್ತಿದೆ.


ಸುಮಾರು ತಿಂಗಳುಗಳಿಂದ ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಎಲ್ಲಾ ಸರ್ಕಾರಿ ವೈದ್ಯರು, ಸಿಬ್ಬಂದಿಗಳು ತಮ್ಮನ್ನು ತೊಡೊಗಿಸಿಕೊಂಡಿದ್ದು, ಅನ್ಯ ರೋಗಿಗಳ ಚಿಕಿತ್ಸೆ ಮತ್ತು ಉಪಚಾರವನ್ನು ಕಡೆಗಣಿಸಿರುವುದಾಗಿ ಸಾರ್ವಜನಿಕರಲ್ಲಿ ಆತಂಕ ಉಂಟಾಗಿರುತ್ತದೆ.


ಈ ಹಿನ್ನಲೆಯಲ್ಲಿ ಎಲ್ಲಾ ಸರ್ಕಾರಿ ಚಿಕಿತ್ಸಾ ಸಂಸ್ಥೆಗಳಾದ ಸಾರ್ವಜನಿಕ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ, ಸರ್ಕಾರಿ ವೈದ್ಯಕೀಯ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್-19 ಹೊರತಾದ ಇತರೆ ರೋಗಿಗಳ ಸಾಮಾನ್ಯ, ದ್ವಿತೀಯ, ತೃತೀಯ ಹಾಗೂ ತೀವ್ರ ಚಿಕಿತ್ಸೆಗಳನ್ನು ಈ ಕ್ಷಣದಿಂದ ಪ್ರಾರಂಭಿಸುವಂತೆ ಆದೇಶಿಸಿದ್ದಾರೆ. ಅಲ್ಲದೇ ಕೋವಿಡ್-19 ಕಾರಣವೊಡ್ಡಿ ಇತರೆ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ನಿರ್ದೇಶಿಸುವುದನ್ನು ಪ್ರತಿಬಂಧಿಸಿದೆ ಎಂಬುದಾಗಿ ತಿಳಿಸಿದ್ದಾರೆ.

Previous Post Next Post