ಈ ಬಾರಿಯ ಹಜ್ ಕರ್ಮಕ್ಕೆ ಪ್ರೌಢ ಸಮಾಪ್ತಿ, ಮಕ್ಕಾಗೆ ವಿದಾಯ ಹೇಳುತ್ತಿರುವ ಹಜ್ಜಾಜ್ ಗಳು
ಮಕ್ಕಾ: ಹಜ್ಜ್ ಕರ್ಮ ಪೂರ್ತಿಗೊಳಿಸಿದ ನಂತರ ಯಾತ್ರಿಕರು ಮಕ್ಕಾದಿಂದ ಮರಳಲು ತಯಾರಾಗುತಿದ್ದಾರೆ. ಈ ವರ್ಷದ ಹಜ್ಜ್ ಯಶಸ್ವಿಯಾಗಿ ಮುಕ್ತಾಯಗೊಂಡಿದೆ ಎಂದು ಹಜ್ ಮತ್ತು ಉಮ್ರಾ ಸಚಿವಾಲಯ ತಿಳಿಸಿದೆ. ಯಾವುದೇ ಯಾತ್ರಿಕನಿಗೆ ಯಾವುದೇ ಕೋವಿಡೋ ಲಕ್ಷಣಗಳಿಲ್ಲ. ಮಲಯಾಳಿಗಳು ಸೇರಿದಂತೆ ಅರ್ಧಕ್ಕಿಂತ ಹೆಚ್ಚು ಜನರು ಇಂದು ಮೆಕ್ಕಾದಿಂದ ಹಿಂದಿರುಗಲಿದ್ದಾರೆ. ಉಳಿದವರು ಇಂದು ಕೂಡ ಕಲ್ಲುಗಳ ಎಸೆತ ಕರ್ಮ ಪೂರ್ತಿ ಗೊಳಿಸಿ ಹಿಂತಿರುಗಲಿರುವರು.
ಹಜ್ ನ ಪ್ರಮುಖ ಕರ್ಮಗಳು ಪೂರ್ಣಗೊಂಡ ನಂತರ ಹಜ್ ಯಾತ್ರಿಕರು ಮಿನಾ ಕಣಿವೆಯಲ್ಲಿ ಪ್ರಾರ್ಥನೆಗಳ ಮೂಲಕ ಸಮಯ ಕಳೆದರು. ಕಲ್ಲೆಸತ ಕರ್ಮವನ್ನು ಪೂರ್ಣಗೊಳಿಸಿದ ನಂತರ ಹಾಜಿಗಳು ಕಅಬಾ ತಲುಪಿದರು. ಇಲ್ಲಿ ವಿದಾಯದ ತವಾಫ್ ಮಾಡಿದರು. ಹಾಜಿಗಳು ನಿನ್ನೆ ಸಂಜೆ ಮಗ್ರಿಬ್ ಪ್ರಾರ್ಥನೆಗೆ ಮುಂಚಿತವಾಗಿ ಮಕ್ಕಾದಿಂದ ಯಾತ್ರೆ ಹೊರಟರು.
ಅರ್ಧಕ್ಕಿಂತ ಹೆಚ್ಚು ಹಾಜಿಗಳು ನಿನ್ನೆ ಮರಳಿದರು. ಉಳಿದವರು ಇಂದು ಹಿಂತಿರುಗಲಿದ್ದಾರೆ. ಅವರು ಇಂದು ಕಲ್ಲೆಸತ ಕರ್ಮ ನಿರ್ವಹಿಸಬೇಕು. ನಂತರ ಅವರು ಕಅಬಾಗೆ ಹೋಗಿ ವಿದಾ-ಎ-ತವಾಫ್ ಮಾಡಿದ ನಂತರ ಮಕ್ಕಾಗೆ ವಿದಾಯ ಹೇಳುತ್ತಾರೆ. ಹಜ್ಜ್ ಯಾತ್ರಿಕರ ಲಗೇಜು ಮನೆಗೆ ತಲುಪಿಸಲು ಈ ಬಾರಿ ಸೌದಿ ಪೋಸ್ಟ್ ಯಾತ್ರಿಕರಿಗೆ ವಿಶೇಷ ಸೌಲಭ್ಯಗಳನ್ನು ಮಾಡಿದೆ. 68 ರಿಯಾಲ್ ಪಾವತಿಸುವವರಿಗೆ, ಸಾಮಾನುಗಳನ್ನು ಮಿನಾ ಡೇರೆಯಿಂದದ ಅವರವರ ಮನೆಗೆ ತಲುಪಿಸಲಾಗುತ್ತದೆ. ಇಂದು ಹಿಂದಿರುಗುವ ಯಾತ್ರಾರ್ಥಿಗಳಿಗೆ ಬಸ್ ಸೌಲಭ್ಯ ಮುಂದುವರಿಯಲಿದೆ.