ರಾಜ್ಯದಲ್ಲಿ ಇಂದು1857 ಪಾಸಿಟಿವ್, 2050 ಗುಣಮುಖರು

ರಾಜ್ಯದಲ್ಲಿ ಇಂದು1857 ಪಾಸಿಟಿವ್, 2050 ಗುಣಮುಖರು


ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1857 ಜನರಿಗೆ ಸೋಂಕು ತಗುಲಿದ್ದು, 29 ಮಂದಿ ಸಾವನ್ನಪ್ಪಿದ್ದಾರೆ. 2050 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.


ರಾಜ್ಯದಲ್ಲಿ 23,905 ಸಕ್ರಿಯ ಪ್ರಕರಣಗಳು ಇದ್ದು, ಪಾಸಿಟಿವಿಟಿ ದರ ಶೇಕಡ 1.21 ರಷ್ಟು ಇದೆ. ಒಟ್ಟು ಸೋಂಕಿತರ ಸಂಖ್ಯೆ 28,93,556 ಕ್ಕೆ ಏರಿಕೆಯಾಗಿದೆ. ಇದುವರೆಗೆ 36 352 ಮಂದಿ ಸಾವನ್ನಪ್ಪಿದ್ದು, 28,33,276 ಜನ ಗುಣಮುಖರಾಗಿದ್ದಾರೆ.


ಜಿಲ್ಲೆಗಳ ವಿವರ:

ಬಾಗಲಕೋಟೆ 1, ಬಳ್ಳಾರಿ 12, ಬೆಳಗಾವಿ 46, ಬೆಂಗಳೂರು ಗ್ರಾಮಾಂತರ 44, ಬೆಂಗಳೂರು ನಗರ 551, ಬೀದರ್ 1, ಚಾಮರಾಜನಗರ 34, ಚಿಕ್ಕಬಳ್ಳಾಪುರ 18, ಚಿಕ್ಕಮಗಳೂರು 57, ಚಿತ್ರದುರ್ಗ 14, ದಕ್ಷಿಣಕನ್ನಡ 269, ದಾವಣಗೆರೆ 16, ಧಾರವಾಡ 7, ಗದಗ 3, ಹಾಸನ 111, ಹಾವೇರಿ 6, ಕಲಬುರ್ಗಿ 8, ಕೊಡಗು 79, ಕೋಲಾರ 23, ಕೊಪ್ಪಳ 2, ಮಂಡ್ಯ 37, ಮೈಸೂರು 177, ರಾಯಚೂರು 0, ರಾಮನಗರ 1, ಶಿವಮೊಗ್ಗ 51, ತುಮಕೂರು 99, ಉಡುಪಿ 129, ಉತ್ತರ ಕನ್ನಡ 59, ವಿಜಯಪುರ 2, ಯಾದಗಿರಿ 0 ಜನರಿಗೆ ಸೋಂಕು ತಗುಲಿದೆ.


ಕೇರಳದಲ್ಲಿ ಇಂದು 18,531 ಪಾಸಿಟಿವ್, 15,507 ರೋಗ ಗುಣಮುಖರು


ತಿರುವನಂತಪುರಂ | ಕೇರಳದಲ್ಲಿ ಇಂದು ರಾಜ್ಯದಲ್ಲಿ 18,531 ಜನರಿಗೆ ಸೋಂಕು ದೃಢ ಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 1,55,568 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಪಾಸಿಟಿವ್ ದರ ಶೇಕಡ 11.91 ಆಗಿದೆ. ಇಂದು15,507 ಜನರು ರೋಗ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ


Read More

Previous Post Next Post