ಉಮ್ರಾ ಪುನರಾರಂಭಗೊಂಡಿದ್ದು, ಮೊದಲ ತಂಡ ಇಂದು ಬೆಳಿಗ್ಗೆ ಮಕ್ಕಾ ಹರಂ ತಲುಪಿತು

ಉಮ್ರಾ ಪುನರಾರಂಭಗೊಂಡಿದ್ದು, ಮೊದಲ ತಂಡ ಇಂದು ಬೆಳಿಗ್ಗೆ ಮಕ್ಕಾ ಹರಂ ತಲುಪಿತು 


ಮಕ್ಕಾ: ಹಜ್ ಸೀಸನ್ ಯಶಸ್ವಿಯಾಗಿ ಪೂರ್ಣಗೊಂಡ ನಂತರ ಉಮ್ರಾ ಯಾತ್ರೆ ಶುರುವಾಗಿದೆ. ಕೊರೋನಾ ವೈರಸ್ ವಿರುದ್ಧ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ ಉಮ್ರಾ ಯಾತ್ರಾರ್ಥಿಗಳ ಮೊದಲ ಬ್ಯಾಚ್ ಇಂದು ಬೆಳಿಗ್ಗೆ ಮಕ್ಕಾ ಹರಾಮ್ ಮಸೀದಿಗೆ ಆಗಮಿಸಿದೆ. ಎರಡು ಹರಾಮ್ ಕಾರ್ಯಾಲಯ ಯಾತ್ರಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುತ್ತಿದೆ ಮತ್ತು ಅದಕ್ಕಿರುವ ಕ್ರಮ ಕೈಗೊಂಡಿದೆ. ಸಂಪೂರ್ಣ ಕೋವಿಡ್ ಪ್ರೋಟೋಕಾಲ್ ಪ್ರಕಾರ ಉಮ್ರಾ ಯಾತ್ರೆ ನಡೆಸಲಾಗುತ್ತದೆ. ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಲು ವಿಶೇಷ ಕಾಳಜಿ ವಹಿಸಲಾಗುತ್ತದೆ.


 ಉಮ್ರಾ ಯಾತ್ರೆಯನ್ನು ಪುನರಾರಂಭಿಸಿದ ಮೊದಲ ದಿನಗಳಲ್ಲಿ ಕೇವಲ 20,000 ಜನರಿಗೆ ಮಾತ್ರ ಅವಕಾಶ ನೀಡಲಾಯಿತು. ಕ್ರಮೇಣ ಹಂತ ಹಂತವಾಗಿ ಸಂಖ್ಯೆ ಹೆಚ್ಚಿಸಲಾಗುವುದು ಎಂದು ಸಚಿವಾಲಯ ಹೇಳಿದೆ.


Previous Post Next Post