ರಾಜ್ಯದಲ್ಲಿ ಇಂದು 1,869 ಹೊಸ ಕೇಸ್, 3,144 ಮಂದಿ ಡಿಸ್ಚಾರ್ಜ್

ರಾಜ್ಯದಲ್ಲಿ ಇಂದು 1,869 ಹೊಸ ಕೇಸ್, 3,144 ಮಂದಿ ಡಿಸ್ಚಾರ್ಜ್


ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆಯಾಗಿದ್ದು ಇಂದು 1,869 ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಕಳೆದ 24 ಗಂಟೆಯಲ್ಲಿ ಮಹಾಮಾರಿಗೆ 42 ಮಂದಿ ಬಲಿಯಾಗಿದ್ದಾರೆ. 


ರಾಜ್ಯದಲ್ಲಿ ಇಂದು 3,144 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.  ಇನ್ನು 30,082 ಸಕ್ರೀಯ ಪ್ರಕರಣಗಳಿವೆ.


ರಾಜ್ಯಾದ್ಯಂತ ಇಂದು 1,42,856 ಕೋವಿಡ್ ಟೆಸ್ಟ್ ನಡೆಸಲಾಗಿದ್ದು, 1,869 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 1.30ಕ್ಕೆ ಇಳಿದಿದೆ.


ಜಿಲ್ಲಾ ವಾರು ಪ್ರಕರಣಗಳು ಈ ರೀತಿ ಇದೆ



ಕೇರಳದಲ್ಲಿ ಇಂದು 16148 ಮಂದಿಗೆ ಕೊವಿಡ್ ಪಾಸಿಟಿವ್, ಪಾಸಿಟಿವಿಟಿ ದರ 10.76%, 13197 ಮಂದಿ ರೋಗ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 1,24,779 ಕೇಸ್ ಗಳು ಕೇರಳದಲ್ಲಿ ಸಕ್ರೀಯವಾಗಿದೆ.


Read More


ಈಗಿನ ಸುದ್ದಿಯ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಬಗ್ಗೆ ಎಚ್ಚರಿಕೆ ಅಗತ್ಯ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.

أحدث أقدم