ರಾಜ್ಯದಲ್ಲಿ ಇಂದು 1,987 ಪಾಸಿಟಿವ್, ಪಾಸಿಟಿವಿಟಿ ದರ ಶೇ. 1.43

ರಾಜ್ಯದಲ್ಲಿ ಇಂದು 1,987 ಪಾಸಿಟಿವ್, ಪಾಸಿಟಿವಿಟಿ ದರ ಶೇ. 1.43


ಬೆಂಗಳೂರು: ಕೊರೋನಾ ಎರಡನೇ ಅಲೆ ನಂತರ ಇಳಿಮುಖವಾಗುತ್ತಿದ್ದ ಕೊರೋನಾ ಪ್ರಕರಣಗಳ ಸಂಖ್ಯೆ ಇಂದು ಮತ್ತೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 1,987 ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ 29,05,124ಕ್ಕೆ ಏರಿಕೆಯಾಗಿದೆ.


ಒಂದೇ ದಿನದಲ್ಲಿ ಮಹಾಮಾರಿಗೆ 37 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 36,562ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಪ್ರಕಟಿಸಿದೆ.


ರಾಜ್ಯದಲ್ಲಿ ಇಂದು 1,632 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 28,44,742ಕ್ಕೆ ಏರಿಕೆಯಾಗಿದೆ. ಇನ್ನು 23,796 ಸಕ್ರೀಯ ಪ್ರಕರಣಗಳಿವೆ.


ರಾಜ್ಯಾದ್ಯಂತ ಇಂದು 1,38,532 ಕೋವಿಡ್ ಟೆಸ್ಟ್ ನಡೆಸಲಾಗಿದ್ದು, 1,987 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 1.43ಕ್ಕೆ ಇಳಿದಿದೆ


ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-4, ಬಳ್ಳಾರಿ-15, ಬೆಳಗಾವಿ-56, ಬೆಂಗಳೂರು ಗ್ರಾಮಾಂತರ-40, ಬೆಂಗಳೂರು ನಗರ-450, ಬೀದರ್-0, ಚಾಮರಾಜನಗರ-23, ಚಿಕ್ಕಬಳ್ಳಾಪುರ-4, ಚಿಕ್ಕಮಗಳೂರು-55, ಚಿತ್ರದುರ್ಗ-26, ದಕ್ಷಿಣ ಕನ್ನಡ-365, ದಾವಣಗೆರೆ-14, ಧಾರವಾಡ-19, ಗದಗ-3, ಹಾಸನ-105, ಹಾವೇರಿ-3, ಕಲಬುರಗಿ-6, ಕೊಡಗು-132, ಕೋಲಾರ-51, ಕೊಪ್ಪಳ-7, ಮಂಡ್ಯ-47, ಮೈಸೂರು-177, ರಾಯಚೂರು-1, ರಾಮನಗರ-8, ಶಿವಮೊಗ್ಗ-40, ತುಮಕೂರು-108, ಉಡುಪಿ-148, ಉತ್ತರ ಕನ್ನಡ-75, ವಿಜಯಪುರ-4, ಯಾದಗಿರಿ-1.


ಕೇರಳದಲ್ಲಿ ಇಂದು 20,624 ಪಾಸಿಟಿವ್, ಪಾಸಿಟಿವಿಟಿ ದರ 12.31%


ಕೇರಳದಲ್ಲಿ ಇಂದು 20,624 ಪಾಸಿಟಿವ್ ದೃಡಪಟ್ಟಿದೆ. ಕಳೆದ 24 ಗಂಟೆಯಲ್ಲಿ 1,67,579 ಸ್ಯಾಂಪಲ್‌ ಪರೀಕ್ಷೆ ಮಾಡಲಾಗಿದ್ದು ಟೆಸ್ಟ್ ಪಾಸಿಟಿವಿಟಿ 12.31% ಇದೆ. ಚಿಕಿತ್ಸೆಯಲ್ಲಿದ್ದ 16,865 ಮಂದಿ ಇಂದು ರೋಗ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು.


ಮಂಗಳೂರು ಕಾಸರಗೋಡು ನಡುವೆ ಒಂದು ವಾರ ಬಸ್ ಸಂಚಾರ ಸ್ಥಗಿತ 


ಮಂಗಳೂರು: ನೆರೆಯ ಕೆರಳದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ತೀವ್ರಗೊಂಡಿರುವ ಹಿನ್ನಲೆಯಲ್ಲಿ ಜಿಲ್ಲೆಯಿಂದ ಕಾಸರಗೋಡುಗೆ ಸಂಚರಿಸುವ ಸರ್ಕಾರಿ ಹಾಗೂ ಖಾಸಗಿ ಬಸ್‍ಗಳನ್ನು ಆಗಸ್ಟ್ 1 ರಿಂದ ಒಂದು ವಾರದ ಕಾಲ ಸ್ಥಗಿತಗೊಳಿಸಲಾಗುವುದುಎಂದು ಸಂಸದರಾದ ನಳೀನ್ ಕುಮಾರ್ ಕಟೀಲು ಅವರು ತಿಳಿಸಿದರು.


ಅವರು ಜುಲೈ 31ರ ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೋವಿಡ್19 ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಅಧ್ಯಕ್ತೆ ವಹಿಸಿ ಮಾತನಾಡಿದರು.


ಕೋವಿಡ್ ಪಾಸಿಟಿವಿಟಿ ಪ್ರಕರಣಗಳು ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿಯೂ ಹೆಚ್ಚಾಗುತ್ತಿದ್ದು, ಜಿಲ್ಲೆಯ ಗಡಿಭಾಗದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಕೊರೊನಾ ಸೋಂಕು ಹರಡದಂತೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದರೊಂದಿಗೆ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ ಎಂದ ಅವರು, ಆಗಸ್ಟ್ 1 ರಿಂದ 7 ದಿನ ಮಂಗಳೂರಿನಿಂದ ಕೇರಳ ರಾಜ್ಯದ ಕಾಸರಗೋಡುಗೆ ಹೋಗುವ ಕೆ.ಎಸ್.ಆರ್.ಟಿ.ಸಿ ಹಾಗೂ ಖಾಸಗಿ ಬಸ್‍ಗಳ ಸಂಚಾರವನ್ನು ನಿಲ್ಲಿಸಬೇಕು, ಕೇರಳದಿಂದ ಜಿಲ್ಲೆಗೆ ಬರುವ ವಿದ್ಯಾರ್ಥಿಗಳಲ್ಲಿ ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿ ಇರಬೇಕು, ಮುಖ್ಯವಾಗಿ ಅಲ್ಲಿನ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ತಾವಿರುವ ವಿದ್ಯಾರ್ಥಿನಿಲಯಗಳಲ್ಲಿಯೇ ಒಂದು ವಾರ ಹೋಂ ಕ್ವಾರಂಟೈನ್‍ನಲ್ಲಿಯೇ ಇರಬೇಕು, ಪ್ರತಿ ದಿನ ಅವರುಗಳ ಬಗ್ಗೆ ನಿಗಾ ವಹಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.


Read More

أحدث أقدم