ರಾಜ್ಯದಲ್ಲಿ ಇಂದು 1990 ಹೊಸ ಸೋಂಕು ದೃಢ, 2537 ಡಿಸ್ಚಾರ್ಜ್

ರಾಜ್ಯದಲ್ಲಿ ಇಂದು 1990 ಹೊಸ ಸೋಂಕು ದೃಢ, 2537 ಡಿಸ್ಚಾರ್ಜ್


ಬೆಂಗಳೂರು : ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 1990 ಕೋವಿಡ್ ಹೊಸ ಪ್ರಕರಣಗಳು ವರದಿಯಾಗಿದ್ದು, ಸೋಂಕಿನಿಂದ 45 ಜನರು ಸಾವನ್ನಪ್ಪಿದ್ದಾರೆ ಎಂದು ಇಂದು (ಜುಲೈ 14) ಸಂಜೆ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.


ಇನ್ನು ಎಂದಿನಂತೆ ಇಂದು ಕೂಡ ಗುಣಮುಖರ ಸಂಖ್ಯೆ ಹೆಚ್ಚು ಇದೆ. ರಾಜ್ಯದಲ್ಲಿ 2537 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ 1.59%ನಷ್ಟಿದೆ. ಹಾಗೂ ಮರಣ ಪ್ರಮಾಣ 2.26%ನಷ್ಟಿದೆ. ಕಳೆದ ಕಳೆದ 24 ಗಂಟೆಗಳಲ್ಲಿ 1,24,494 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ರಾಜ್ಯದಲ್ಲಿರುವ ಸಕ್ರಿಯ ಪ್ರಕರಣಗಳ ಸಂಖ್ಯೆ 33642.



ಜಿಲ್ಲಾವಾರು ಕೊರೊನಾ ಸೋಂಕಿತರ ವಿವರ
ಬೆಂಗಳೂರು ನಗರ 400, ದಕ್ಷಿಣ ಕನ್ನಡ ಜಿಲ್ಲೆ 219, ಮೈಸೂರು 211, ಹಾಸನ 175, ಬೆಳಗಾವಿ 140, ಉಡುಪಿ 120, ಶಿವಮೊಗ್ಗ 99, ಚಿಕ್ಕಮಗಳೂರು 94, ತುಮಕೂರು 78, ಮಂಡ್ಯ 69, ಉತ್ತರ ಕನ್ನಡ 69, ಕೊಡಗು 42, ಚಾಮರಾಜನಗರ 41, ಕೋಲಾರ 40, ಬೆಂಗಳೂರು ಗ್ರಾಮಾಂತರ 40, ಚಿಕ್ಕಬಳ್ಳಾಪುರ 23, ದಾವಣಗೆರೆ 20, ಧಾರವಾಡ 18, ರಾಮನಗರ 17, ಬಳ್ಳಾರಿ 16, ಕಲಬುರಗಿ 14, ಹಾವೇರಿ 10, ಕೊಪ್ಪಳ 10, ಗದಗ 7, ವಿಜಯಪುರ 7, ಬಾಗಲಕೋಟೆ 4, ಚಿತ್ರದುರ್ಗ 4, ಬೀದರ್ 2 ಹಾಗೂ ರಾಯಚೂರು ಜಿಲ್ಲೆಯಲ್ಲಿ 1 ಕೊರೊನಾ ಪ್ರಕರಣ ಪತ್ತೆಯಾಗಿದೆ.



ಕೇರಳದಲ್ಲಿ ಇಂದು 15637 ಪಾಸಿಟಿವ್ ಕೇಸ್, ಪಾಸಿಟಿವಿಟಿದ 10.03% , ಇಂದಿನ ಡಿಸ್ಚಾರ್ಜ್ ಸಂಖ್ಯೆ 12,974. 


ಸೂಚನೆ: ಕೊರೊನ ಗೆಲ್ಲೋಣ, ಮಾಸ್ಕ್ ಧರಿಸಿ, ಅಂತರ ಕಾಪಾಡಿ
Previous Post Next Post