ರಾಜ್ಯದಲ್ಲಿ ಇಂದು 1705 ಪಾಸಿಟಿವ್, 2243 ಸೋಂಕಿತರು ಗುಣಮುಖರು

ರಾಜ್ಯದಲ್ಲಿ ಇಂದು 1705 ಪಾಸಿಟಿವ್, 2243 ಸೋಂಕಿತರು ಗುಣಮುಖರು

ಬೆಂಗಳೂರು: ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 1705 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 2891699ಕ್ಕೆ ಏರಿಕೆಯಾಗಿದೆ. 2243 ಸೋಂಕಿತರು ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಒಟ್ಟು ಗುಣಮುಖರಾದವರ ಸಂಖ್ಯೆ 2831226ಕ್ಕೆ ಏರಿಕೆಯಾಗಿದೆ.


ಸೋಂಕಿನಿಂದಾಗಿ 30 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟಾರೇ ಮೃತರ ಸಂಖ್ಯೆ 36323 ಆಗಿದೆ. ರಾಜ್ಯದಲ್ಲಿ ಸದ್ಯ 24127 ಸಕ್ರಿಯ ಪ್ರಕರಣಗಳಿರುವುದಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಸೋಂಕಿನ ಶೇಕಡಾವಾರು ಪ್ರಮಾಣ ಶೇ. 1.35 ರಷ್ಟಿದ್ದು, ಮರಣ ಪ್ರಮಾಣ ಶೇ. 1.75 ರಷ್ಟಿದೆ.
ಜಿಲ್ಲಾವಾರು ಸೋಂಕಿತರ ವಿವರ

ಬಾಗಲಕೋಟೆ 8, ಬಳ್ಳಾರಿ 10, ಬೆಳಗಾವಿ 90, ಬೆಂಗಳೂರು ಗ್ರಾಮಾಂತರ 41, ಬೆಂಗಳೂರು ನಗರ 400, ಬೀದರ್ 2, ಚಾಮರಾಜನಗರ 30, ಚಿಕ್ಕಬಳ್ಳಾಪುರ 17, ಚಿಕ್ಕಮಗಳೂರು 69, ಚಿತ್ರದುರ್ಗ 10, ದಕ್ಷಿಣ ಕನ್ನಡ 295, ದಾವಣಗೆರೆ 20, ಧಾರವಾಡ 6, ಗದಗ 3, ಹಾಸನ 83, ಹಾವೇರಿ 4, ಕಲಬುರ್ಗಿ 7, ಕೊಡಗು 62, ಕೋಲಾರ 34, ಕೊಪ್ಪಳ 3, ಮಂಡ್ಯ 38, ಮೈಸೂರು 157, ರಾಯಚೂರು 1, ರಾಮನಗರ 8, ಶಿವಮೊಗ್ಗ 74, ತುಮಕೂರು 72, ಉಡುಪಿ 131, ಉತ್ತರಕನ್ನಡ 23, ವಿಜಯಪುರ 4, ಯಾದಗಿರಿ ಜಿಲ್ಲೆಯಲ್ಲಿ ಮೂವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
Previous Post Next Post