ರಾಜ್ಯದಲ್ಲಿ ಇಂದು 2290 ಪಾಸಿಟಿವ್, 3045 ಡಿಸ್ಚಾರ್ಜ್, ರಾಜ್ಯದಲ್ಲಿನ ಪಾಸಿಟಿವಿಟಿ ದರ 1.48%
ಬೆಂಗಳೂರು: ಕರ್ನಾಟಕದಲ್ಲಿ ಶುಕ್ರವಾರ ಒಟ್ಟು 2290 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ವಿವಿಧ ಜಿಲ್ಲೆಗಳಲ್ಲಿ 68 ಜನರು ಸಾವನ್ನಪ್ಪಿದ್ದಾರೆ. ಇಂದು 3045 ಮಂದಿ ರೋಗ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ರಾಜ್ಯದ ಕೊರೊನಾ ಸೋಂಕಿತರ ಸಂಖ್ಯೆ 28,67,158ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 27,93,498 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಕೊರೊನಾದಿಂದ ಈವರೆಗೆ 35,731 ಜನರು ಸಾವನ್ನಪ್ಪಿದ್ದಾರೆ. ಒಟ್ಟು 37,906 ಕೊರೊನಾ ಸೋಂಕು ಸಕ್ರಿಯ ಪ್ರಕರಣಗಳಿವೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿಹೆಚ್ಚು, ಅಂದರೆ 472 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಉಳಿದಂತೆ ಹಾಸನ 228, ಮೈಸೂರು 216, ದಕ್ಷಿಣ ಕನ್ನಡ 209, ಶಿವಮೊಗ್ಗ 152, ಉಡುಪಿ 131, ತುಮಕೂರು 115, ಕೊಡಗು 113, ಮಂಡ್ಯ 95, ಬೆಳಗಾವಿ 87, ಚಿಕ್ಕಮಗಳೂರು 69, ಕೋಲಾರ 67, ಬೆಂಗಳೂರು ಗ್ರಾಮಾಂತರ 63, ಉತ್ತರ ಕನ್ನಡ 55, ಚಾಮರಾಜನಗರ 43, ದಾವಣಗೆರೆ 32, ಚಿತ್ರದುರ್ಗ 30, ಧಾರವಾಡ 27, ಚಿಕ್ಕಬಳ್ಳಾಪುರ 17, ರಾಮನಗರ 14, ಬಳ್ಳಾರಿ 13, ಹಾವೇರಿ 11, ಕೊಪ್ಪಳ 10, ಕಲಬುರಗಿ 6, ಗದಗ 5, ಯಾದಗಿರಿ 5, ರಾಯಚೂರು 2, ವಿಜಯಪುರ 2, ಬೀದರ್ 1 ಪ್ರಕರಣ ವರದಿಯಾಗಿದೆ.
ಸೂಚನೆ- ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು 'ಈಗಿನ ಸುದ್ದಿ'ಯ ಕಳಕಳಿ