ಸೌದಿಯಲ್ಲಿ ಚಂದ್ರದರ್ಶನವಾಗಿಲ್ಲ: ಜುಲೈ 20 ರಂದು ಈದುಲ್ ಅಝ್'ಹಾ, 19 ಕ್ಕೆ ಐತಿಹಾಸಿಕ ಅರಫಾ ಸಂಗಮ
ರಿಯಾದ್|ಸೌದಿ ಅರೇಬಿಯಾದಲ್ಲಿ ದುಲ್ ಹಜ್ ತಿಂಗಳ ಚಂದ್ರ ದರ್ಶನವಾಗದ ಹಿನ್ನೆಲೆಯಲ್ಲಿ ದುಲ್ ಖಅದ್ ತಿಂಗಳು 30 ಪೂರ್ತೀಕರಿಸಿ, ಜುಲೈ 11 ದುಲ್ ಹಜ್ ಪ್ರಥಮ ದಿನವಾಗಿದೆ ಎಂದು ಅಧಿಕೃತರು ತಿಳಿಸಿದ್ದಾರೆ.
ಹಜ್‌ನ ಪ್ರಮುಖ ಕರ್ಮವಾಗಿರುವ ದುಲ್ ಹಜ್ 9 ನೇ ದಿನದ ಅರಫಾ ಸಂಗಮವು ಜುಲೈ 19 ರಂದು ಆಗಿರಲಿದ್ದು, ಜುಲೈ 20 ರಂದು ಈದುಲ್ ಅಝ್ಹಾ ಹಬ್ಬ ಆಚರಿಸಲಾಗುವುದು.
ದುಲ್ ಖಅದ್ 29 ರ ಸಂಜೆ ದುಲ್ ಹಿಜ್ಜಾ ತಿಂಗಳ ಚಂದ್ರರ್ಶನದ ಬಗ್ಗೆ ಮಾಹಿತಿ ನೀಡಲು ದೇಶದ ವಿಶ್ವಾಸಿಗಳಿಗೆ ಸುಪ್ರೀಂ ಕೋರ್ಟ್ ಕರೆ ನೀಡಿತ್ತು. ಆದರೆ ಎಲ್ಲಿಯೂ ಚಂದ್ರ ದರ್ಶನವಾಗಿಲ್ಲ.
ಕೇರಳ ಕರಾವಳಿಯಲ್ಲಿ ಇಂದು ರಾತ್ರಿ ಹಜ್ಜ್ ತಿಂಗಳ ಚಂದ್ರ ದರ್ಶನಕ್ಕೆ ಸಾಧ್ಯತೆಯಿದ್ದು, ಮಾಹಿತಿ ನೀಡಲು ಖಾಝಿಗಳು ಕರೆ ನೀಡಿದ್ದಾರೆ.