ರಾಜ್ಯಾಧ್ಯಂತ ಇಂದಿನಿಂದ ಅನ್ಲಾಕ್ 4.0 ಜಾರಿ, ಆಗಸ್ಟ್ 2 ರ ವರೆಗೆ ಹೊಸ ಮಾರ್ಗಸೂಚಿ ಅನ್ವಯ

ರಾಜ್ಯಾಧ್ಯಂತ ಇಂದಿನಿಂದ ಅನ್ಲಾಕ್ 4.0 ಜಾರಿ, ಅಗಸ್ಟ್ 2 ರ ವರೆಗೆ ಹೊಸ ಮಾರ್ಗಸೂಚಿ ಅನ್ವಯ


ಬೆಂಗಳೂರು : ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಿನ್ನೆ ಕೋವಿಡ್ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳ ಸಭೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯಿತು. ಇಂತಹ ಸಭೆಯಲ್ಲಿ ಕೈಗೊಂಡಂತ ನಿರ್ಣಯಗಳ ಕುರಿತಂತೆ ರಾಜ್ಯ ಸರ್ಕಾರದಿಂದ Karnataka Unlock 4.0 ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಈ ಅನ್ ಲಾಕ್ 4.0 ಇಂದಿನಿಂದ ಜಾರಿಗೊಳ್ಳಲಿದೆ. ಈ ಮಾರ್ಗಸೂಚಿಯಂತೆ ಯಾವುದಕ್ಕೆ ಅನುಮತಿ.? ಯಾವುದಕ್ಕೆ ಇಲ್ಲ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ


ಈ ಕುರಿತಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ನೂತನ ಅನ್ ಲಾಕ್ 4.0 ಮಾರ್ಗಸೂಚಿ ಕ್ರಮಗಳ ಆದೇಶವನ್ನು ಹೊರಡಿಸಿದ್ದು, ಈ Unlock 4.0 ಮಾರ್ಗಸೂಚಿಯಂತೆ ರಾಜ್ಯಾಧ್ಯಂತ ಇಂದಿನಿಂದ ಜಾರಿಗೆ ಬರುವಂತೆ ರಾತ್ರಿ ಕರ್ಪ್ಯೂ ಅವಧಿಯನ್ನು ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ನಿಗಧಿ ಪಡಿಸಲಾಗಿದೆ.


ಇನ್ನೂ ಸಿನಿಮಾ ಹಾಲ್, ಮಲ್ಟಿ ಫ್ಲೆಕ್ಸ್, ಥಿಯೇಟರ್, ರಂಗಮಂದಿರ, ಆಡಿಟೋರಿಯಂ ಮತ್ತು ಸಿಮಿಲರ್ ಪ್ಲೇಸ್ ಗಳನ್ನು ಶೇ.50ರಷ್ಟು ಜನರೊಂದಿಗೆ ಕೊರೋನಾ ಮಾರ್ಗಸೂಚಿ ಕ್ರಮಗಳನ್ನು ಅನುಸರಿಸಿ ಇಂದಿನಿಂದ ತೆರೆಯೋದಕ್ಕೆ ಅವಕಾಶ ನೀಡಲಾಗಿದೆ.


ಇದಷ್ಟೇ ಅಲ್ಲದೇ ಕಾಲೇಜ್ ಮತ್ತು ಇನ್ ಸ್ಟಿಟ್ಯೂಷನ್ ಗಳನ್ನು ಡಿಪಾರ್ಟಮ್ಮೆಂಟ್ ಆಫ್ ಹೈಯರ್ ಎಜುಕೇಷನ್ ನಿರ್ದೇಶನದಂತೆ ದಿನಾಂಕ 26-07-2021ರಿಂದ ತೆರೆಯಲು ಅವಕಾಶ ನೀಡಲಾಗಿದೆ. ಜೊತೆಗೆ ಕೋವಿಡ್ ಮಾರ್ಗಸೂಚಿ ಕ್ರಮಗಳ ಪಾಲನೆಯೊಂದಿಗೆ ತೆರೆಯೋದಕ್ಕೆ ಅನುಮತಿಸಿದೆ. ಅಲ್ಲದೇ ಕಾಲೇಜಿಗೆ ಆಗಮಿಸುವಂತ ವಿದ್ಯಾರ್ಥಿಗಳು, ಉಪನ್ಯಾಸಕರು, ಮತ್ತು ನಾನ್ ಟೀಚಿಂಗ್ ಸ್ಟಾಫ್ ಗಳು ಕಡ್ಡಾಯವಾಗಿ ಒಂದು ಡೋಸ್ ಕೊರೋನಾ ಲಸಿಕೆ ಪಡೆದಿರೋ ಮಾನದಂಡವನ್ನು ನಿಗದಿಪಡಿಸಿದೆ. ವಿದ್ಯಾರ್ಥಿಗಳ ಹಾಜರಾತಿ ಐಚ್ಛಿಕವಾಗಿರುತ್ತದೆ ಎಂದು ತಿಳಿಸಿದೆ.

ದೀರ್ಘಕಾಲೀನ ತಾಂತ್ರಿಕ ಕೋರ್ಸ್ ಗಳು ಸೇರಿದಂತೆ ಎಲ್ಲಾ ಕೌಶಲ್ಯ ಅಭಿವೃದ್ಧಿ ತರಬೇತಿಗಳು ಕೋವಿಡ್ ಸೂಕ್ತ ನಡವಳಿಕೆಗೆ ಕಟ್ಟುನಿಟ್ಟಾಗಿ ಪಾಲನೆಯ ನಿಯಮಕ್ಕೆ ಒಳಪಟ್ಟು ಅನುಮತಿಸಲಾಗಿದೆ. ಆದ್ರೇ ವಿದ್ಯಾರ್ಥಿಗಳು, ಬೋಧನೆ ಮತ್ತು ಬೋಧಕೇತರ /ಇತರ ಸಿಬ್ಬಂದಿ ಕೋವಿಡ್-19 ಲಸಿಕೆಯ ಒಂದು ಡೋಸ್ ಗೆ ಪಡೆದಿರೋದಿಗೆ ಮಾತ್ರ ಕಾಲೇಜಿಗೆ ಹಾಜರಾಗಲು ಅನುಮತಿಸಲಾಗಿದೆ.


ಮುಂದಿನ ಆದೇಶದವರೆಗೆ ಕೇರಳ ಮತ್ತು ಮಹಾರಾಷ್ಟ್ರದಿಂದ ಬರುವಂತ ಪ್ರಯಾಣಿಕರಿಗೆ ದಿನಾಂಕ 03-07 ರ ಆದೇಶದಲ್ಲಿ ಜಾರಿಗೊಳಿಸಿದಂತ ಮಾರ್ಗಸೂಚಿ ಕ್ರಮಗಳೇ ಮುಂದುವರೆಯಲಿವೆ. ಇದೀಗ ಹೊರಡಿಸಿರುವಂತ ಅನ್ ಲಾಕ್ 4.0 ಮಾರ್ಗಸೂಚಿ ಕ್ರಮಗಳು ದಿನಾಂಕ 02-08-2021ರವರೆಗೆ ಜಾರಿಯಲ್ಲಿ ಇರಲಿದೆ ಎಂದು ತಿಳಿಸಿದ್ದಾರೆ.


Raed More

أحدث أقدم