ಐತಿಹಾಸಿಕ ಅರಫಾ ಸಂಗಮ ಇಂದು, ಸುರಕ್ಷಾ ಸೇನೇಯೊಂದಿಗೆ 60 ಸಾವಿರ 'ಅಲ್ಲಾಹನ ಅತಿಥಿ'ಗಳು ಅರಫಾದತ್ತ ಪಯಣ

ಐತಿಹಾಸಿಕ ಅರಫಾ ಸಂಗಮ ಇಂದು, ಸುರಕ್ಷಾ ಸೇನೇಯೊಂದಿಗೆ 60 ಸಾವಿರ 'ಅಲ್ಲಾಹನ ಅತಿಥಿ'ಗಳು ಅರಫಾದತ್ತ ಪಯಣ


ಮಕ್ಕಾ |  ಪವಿತ್ರ ಭೂಮಿ ಇಂದು ಅರಾಫ ಸಂಗಮದ ಭಕ್ತಿ ಪೂರ್ಣತೆಗೆ ಸಾಕ್ಷಿಯಾಗಲಿದೆ. ಮಿನಾದಲ್ಲಿ ರಾತ್ರಿ ಕಳೆಯುವ ಹಜ್ ಯಾತ್ರಿಕರು ಸೋಮವಾರ ಇಂದು ಅರಾಫಾ ಮೈದಾನದತ್ತ ಹರಿದು ಬರುತಿದ್ದಾರೆ. ಪ್ರಸಿದ್ಧ 'ಅರಾಫಾ ಸಂಗಮ'ವು ಹಜ್ಜ್ ಕರ್ಮದ ಪ್ರಮುಖ ಭಾಗವಾಗಿದೆ, ಇದು ಜನಾಂಗ, ಬಣ್ಣ, ರಾಷ್ಟ್ರೀಯತೆ ಅಥವಾ ಭಾಷೆಯನ್ನು ಲೆಕ್ಕಿಸದೆ ಪ್ರಪಂಚದಾದ್ಯಂತದ ಮುಸ್ಲಿಮರನ್ನು ಒಟ್ಟುಗೂಡಿಸುತ್ತದೆ.


 ಈ ಬಾರಿ ಯಾತ್ರಾರ್ಥಿಗಳ ಹೆಚ್ಚು ಇರುವುದಿಲ್ಲ.  ಕೋವಿಡ್ ಸಾಂಕ್ರಾಮಿಕ ರೋಗವು ಜಾಗತಿಕವಾಗಿ ಹರಡಿದ ಹಿನ್ನೆಲೆಯಲ್ಲಿ ಸ್ಥಳೀಯ ಮತ್ತು ವಿದೇಶಿ 60,000 ಹಜ್ಜ್ ಯಾತ್ರಿಗಳು ಮಾತ್ರ ಈ ವರ್ಷ ಹಜ್ಜ್ ಮಾಡುತಿದ್ದಾರೆ. ಮುಖ ಗವಸು ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು ಹಜ್ಜಾಜ್ ಗಳು ಈ ಬಾರಿ ಹಜ್ಜ್ ನಿರ್ವಹಿಸಲಿದ್ದಾರೆ. ಹಜ್ಜಾಜ್ ಗಳ ಭಕ್ತಿ ಪೂರ್ಣ ಸಂಗಮದೊಂದಿಗೆ ಅರಫಾ ಮೈದಾನವು ಶುಭ್ರ ಸಾಗರವಾಗಲಿದೆ.


ಸೌದಿ ವಿದ್ವಾಂಸ ಸಭಾ ಸದಸ್ಯರು ಮತ್ತು ರಾಯಲ್ ಕೋರ್ಟ್ ಸಲಹೆಗಾರರಲ್ಲಿ ಒಬ್ಬರಾದ ಶೇಖ್ ಅಬ್ದುಲ್ಲಾ ಅಲ್ ಮನಿಅ ವರು ಅರಾಫಾದ ಮಸೀದಿ ನಮೀರಾದಲ್ಲಿ ಕುತುಬಾ ಮತ್ತು ಪ್ರಾರ್ಥನೆಗಳಿಗೆ ನೇತೃತ್ವ ನೀಡಲಿದ್ದಾರೆ. ಮಸೀದಿಯ ವಿಸ್ತೀರ್ಣ 1.24 ಲಕ್ಷ ಚದರ ಅಡಿಗಳಾಗಿದ್ದು, ಒಂದು ಸಮಯದಲ್ಲಿ 3.5 ಲಕ್ಷ ಯಾತ್ರಾರ್ಥಿಗಳಿಗೆ ಸ್ಥಳಾವಕಾಶವಿದೆ.  340 ಮೀಟರ್ ಉದ್ದ ಮತ್ತು 240 ಮೀಟರ್ ಅಗಲವಿರುವ ನಮೀರಾ ಮಸೀದಿ ಮುಸ್ದಾಲಿಫಾದ ಮುಂದೆ ಮತ್ತು ಅರಾಫಾದ ಹಿಂದೆ ಇದೆ. ಪ್ರವಾದಿ ಮುಹಮ್ಮದ್ (ಸಅ) ರವರ ವಿದಾಯ ಭಾಷಣದ ನೆನಪಿಗಾಗಿ ಪ್ರತಿವರ್ಷ ಮಸ್ಜಿದುನ್ನಮಿರದಲ್ಲಿ ಕುತುಬ್ ನಡೆಸಲಾಗುತ್ತದೆ.


 ಅರಾಫಾ ಕಣಿವೆ, ಪರ್ವತಗಳಿಂದ ಆವೃತವಾದ ವಿಶಾಲ ಕಣಿವೆ, ಮಕ್ಕಾದಿಂದ 20 ಕಿ.ಮೀ ಪೂರ್ವದಲ್ಲಿದೆ. ಜಮ್ರಾಗಳ ನಾಡು ಮಿನಾದಿಂದ 16 ಕಿ.ಮೀ ದೂರದಲ್ಲಿದೆ ಪುಣ್ಯ ಭೂಮಿ ಅರಫ.


أحدث أقدم