ಅನ್ ಲಾಕ್ 4.O: ಜುಲೈ 26 ರಿಂದ ಪದವಿ ಕಾಲೇಜ್ ಆರಂಭಕ್ಕೆ ಗ್ರೀನ್ ಸಿಗ್ನಲ್, ಸಿನಿಮ ಮಂದಿರ ತೆರೆಯುವುದಕ್ಕೂ ಅನುಮತಿ

ಅನ್ ಲಾಕ್ 4.O: ಜುಲೈ 26 ರಿಂದ ಪದವಿ ಕಾಲೇಜ್ ಆರಂಭಕ್ಕೆ ಗ್ರೀನ್ ಸಿಗ್ನಲ್,  ಸಿನಿಮ ಮಂದಿರ ತೆರೆಯುವುದಕ್ಕೂ ಅನುಮತಿ


ಬೆಂಗಳೂರು : ರಾಜ್ಯ ಸರಕಾರ ಜಾರಿಗೊಳಿಸಿರುವ ಅನ್ ಲಾಕ್ 3.0 ಜು.19ರಂದು ಕೊನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ರವಿವಾರ ಬೆಳಗ್ಗೆ ಸಚಿವರು ಮತ್ತು ಅಧಿಕಾರಿಗಳ ಉನ್ನತಮಟ್ಟದ ಸಭೆ ನಡೆಯಿತು. 


ಜುಲೈ 26 ರಿಂದ ಪದವಿ ಕಾಲೇಜುಗಳ ಆರಂಭಕ್ಕೆ ಅನುಮತಿ ನೀಡಿದ್ದು, ವಿದ್ಯಾರ್ಥಿಗಳು ಕೊರೊನಾ ಲಸಿಕೆ ಮೊದಲ ಡೋಸ್ ಪಡೆದಿರಬೇಕು ಎಂದು ರಾಜ್ಯ ಸರ್ಕಾರ ಹೇಳಿದೆ.


ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯದಲ್ಲಿ ಚಿತ್ರಮಂದಿರಗಳಲ್ಲಿ ಶೇ. 50 ರಷ್ಟು ಪ್ರೇಕ್ಷಕರೊಂದಿಗೆ ಚಿತ್ರಮಂದಿರಗಳ ಓಪನ್ ಮಾಡಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.


ಅಲ್ಲದೇ ನಾಳೆಯಿಂದ ನೈಟ್ ಕರ್ಪ್ಯೂನಲ್ಲೂ ಬದಲಾವಣೆ ಮಾಡಲಾಗಿದ್ದು. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ನೈಟ್ ಕರ್ಪ್ಯೂ ಜಾರಿಗೊಳಿಸಿದೆ.


ಜುಲೈ 26 ರಿಂದ ಪದವಿ ತರಗತಿಗಳು ಆರಂಭವಾಗಲಿದ್ದು, ವಿದ್ಯಾರ್ಥಿಗಳಿಗೆ ಮೊದಲ ಕೊರೊನಾ ಲಸಿಕೆ ಕಡ್ಡಾಯ ಮಾಡಲಾಗಿದೆ. ಜುಲೈ 26 ರಿಂದ ಪದವಿ ತರಗತಿಗಳು ಆಫ್ ಲೈನ್ ಕ್ಲಾಸ್ ಆರಂಭಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.


ಯಾವುದಕ್ಕೆಲ್ಲ ಅನುಮತಿ?
>ಸಿನಿಮಾ ಮಂದಿರ ತೆರೆಯಲು 50 ಪಸೆರ್ಂಟ್ ಅನುಮತಿ
>ಜುಲೈ 26ರಿಂದ ಪದವಿ ಕಾಲೇಜ್ ಓಪನ್ (ಒಂದು ಡೋಸ್ ವ್ಯಾಕ್ಸಿನ್ ಕಡ್ಡಾಯ)
>ನೈಟ್ ಕಫ್ರ್ಯೂ ಅವಧಿಯಲ್ಲಿ ಒಂದು ಗಂಟೆ ಕಡಿತ (ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ರವರೆಗೆ ನೈಟ್ ಕಫ್ರ್ಯೂ)
>ಬಾರ್ ಗಳಲ್ಲಿ ಮಾತ್ರ ಮದ್ಯ ಸೇವನೆಗೆ ಶೇ.50 ರ ಮಿತಿ, 10ರ ತನಕ ಮದ್ಯ ಸೇವನೆಗೆ ಅವಕಾಶ
>ಮದುವೆಗೆ 100 ಜನರ ಮಿತಿ
>ಅಂತ್ಯ ಸಂಸ್ಕಾರಕ್ಕೆ 20 ಜನರ ಮಿತಿ ಮುಂದುವರಿಕೆ


ಏನಿರಲ್ಲ?
ಈಜುಕೊಳಗಳಿಗೆ ನೋ ಪರ್ಮಿಷನ್
ಪಬ್‍ಗಳಲ್ಲಿ ಮದ್ಯ ಸೇವನೆ, ನೈಟ್ ಪಾರ್ಟಿಗಳಿಗೆ ಅವಕಾಶ ಇಲ್ಲ
ಒಳಾಂಗಣ ಚಿತ್ರೀಕರಣ ಮತ್ತು ಕ್ರೀಡಾಂಗಣಗಳಿಗೂ ಅನುಮತಿ ಇಲ್ಲ

ಮುಖ್ಯಮಂತ್ರಿಗಳ ಸಭೆಯಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದ್ದು, ಸಂಜೆ ವೇಳೆಗೆ ಅಧಿಕೃತ ಮಾರ್ಗಸೂಚಿ ಪ್ರಕಟಿಸುವ ಸಾಧ್ಯತೆ ಇದೆ.


Previous Post Next Post