ಬಕ್ರೀದ್: ಈದ್ ನಮಾಝ್ ನಿಯಮ ಸಡಿಲಿಕೆ: ಪರಿಷ್ಕೃತ ಆದೇಶ ಹೊರಡಿಸಿದ ಸರಕಾರ, ಶೇ. 50 ರಷ್ಟು ನಮಾಝಿಗೆ ಅವಕಾಶ

ಬಕ್ರೀದ್: ಈದ್ ನಮಾಝ್ ನಿಯಮ ಸಡಿಲಿಕೆ: ಪರಿಷ್ಕೃತ ಆದೇಶ ಹೊರಡಿಸಿದ ಸರಕಾರ, ಶೇ. 50 ರಷ್ಟು ನಮಾಝಿಗೆ ಅವಕಾಶ


ಬೆಂಗಳೂರ: ಬಕ್ರೀದ್‌ ಹಬ್ಬದ ವೇಳೆ ಮಸೀದಿಗಳಲ್ಲಿ 50 ಜನರು ಮೀರದಂತೆ ಪ್ರಾರ್ಥನೆ ಮಾಡಲು ಅವಕಾಶ ನೀಡಿದ್ದ ಆದೇಶವನ್ನು ಪರಿಷ್ಕರಿಸಲಾಗಿದ್ದು, ಆಯಾ ಮಸೀದಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಶೇ.50 ರಷ್ಟು ಜನರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಬಹುದು ಎಂದು ಸರ್ಕಾರ ಆದೇಶಿಸಿದೆ.


ಜುಲೈ 21ರಂದು ಬಕ್ರೀದ್‌ ಹಬ್ಬದ ಪ್ರಯುಕ್ತ ಮಸೀದಿಯಲ್ಲಿ ಕಡ್ಡಾಯವಾಗಿ ಮಾಸ್ಕ್‌ ಧರಿಸಿ, ಸಾಮಾಜಿಕ ಅಂತರದೊಂದಿಗೆ ಸಾಮೂಹಿಕ ಪ್ರಾರ್ಥನೆ ನಡೆಸಬಹುದು. ಮಸೀದಿಗಳಲ್ಲಿ 50 ಜನಕ್ಕಿಂತ ಹೆಚ್ಚು ಜನ ಭಾಗವಹಿಸುವಂತಿಲ್ಲ ಎಂದು ಶುಕ್ರವಾರದ ಆದೇಶದಲ್ಲಿ ತಿಳಿಸಲಾಗಿತ್ತು.


ಶನಿವಾರ ಪರಿಷ್ಕೃತ ಆದೇಶ ಹೊರಡಿಸಿ, ಈ ಸಂಬಂಧ ಆಯಾ ಮಸೀದಿಗಳಲ್ಲಿ 50 ಜನರು ಮೀರದಂತೆ ಎಂಬುದರ ಬದಲಾಗಿ ಆಯಾ ಮಸೀದಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಶೇ.50ರಷ್ಟು ಜನರು ಮೀರದಂತೆ ಎಂದು ತಿದ್ದಿ ಓದಿಕೊಳ್ಳತಕ್ಕದ್ದು ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಮುಖ್ತಾರ್ ಪಾಷ ಎಚ್.ಜಿ. ತಿದ್ದುಪಡಿ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ. 




Read More ಹೆಚ್ಚಿನ ಸುದ್ದಿ ಓದಿ

Previous Post Next Post