ಇದುವರೆಗೂ ಹೈಕಮಾಂಡ್ ನಿಂದ ಯಾವುದೇ ಸಂದೇಶ ಬಂದಿಲ್ಲ, ರಾತ್ರಿ ಅಥವಾ ನಾಳೆ ಬರಬಹುದು: ಸಿಎಂ ಬಿಎಸ್ವೈ

ಇದುವರೆಗೂ ಹೈಕಮಾಂಡ್ ನಿಂದ ಯಾವುದೇ ಸಂದೇಶ ಬಂದಿಲ್ಲ, ರಾತ್ರಿ ಅಥವಾ ನಾಳೆ ಬರಬಹುದು: ಸಿಎಂ ಬಿಎಸ್ವೈ

ಬೆಂಗಳೂರು: ಕೇಂದ್ರದಿಂದ ಇದುವರೆಗೆ ಯಾವುದೇ ಸಂದೇಶ ನನಗೆ ಬಂದಿಲ್ಲ. ಇಂದು ರಾತ್ರಿಯೊಳಗೆ ಬರಬಹುದು ಎಂದು ಭಾವಿಸಿದ್ದೇನೆ. ನಾಳೆಯವರೆಗೆ ಕಾದು ನೋಡುವೆ. ನಾಳಿನ ಬಿಜೆಪಿ ಸಾಧನೆಯ 2 ವರ್ಷದ ಕಾರ್ಯಕ್ರಮವಿದೆ. ಆ ಕಾರ್ಯಕ್ರಮದ ನಂತ್ರ ಏನ್ ಆಗಲಿದ್ಯೋ ನೋಡೋಣ. ಕೊನೆಯ ಕ್ಷಣದವರೆಗೆ ಕಾದುನೋಡುವೆ. ಬಿಜೆಪಿ ಹೈಕಮಾಂಡ್ ಸೂಚನೆಯಂತೆ ನಡೆದುಕೊಳ್ಳುವೆ. ರಾಜೀನಾಮೆ ನೀಡಿ ಎಂದ್ರೇ ಆಗಲೇ ರಾಜೀನಾಮೆ ಕೊಡೋದಕ್ಕೆ ಸಿದ್ಧನಿದ್ದೇನೆ ಎಂಬುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು.


ಈ ಕುರಿತಂತೆ ಬೆಳಗಾವಿ ಪ್ರವಾಸದ ಬಳಿಕ ಬೆಂಗಳೂರಿಗೆ ವಾಪಾಸ್ ಆದ ನಂತ್ರ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಇದುವರೆಗೆ ಬಂದಿಲ್ಲ. ನಾಳೆ ಬೆಳಿಗ್ಗೆ 2 ವರ್ಷದ ಸಾಧನೆ ಕಾರ್ಯಕ್ರಮಕ್ಕೆ ತೆರಳಿದ್ದೇನೆ. ಕಾರವಾರ ಪ್ರವಾಸಕ್ಕೆ ನಾಳೆ ಹೋಗಬೇಕು ಅಂತ ಇದ್ದೇನೆ. ನಾಳೆ ತೀರ್ಮಾನ ಮಾಡುತ್ತೇನೆ. ಇದುವರೆಗೆ ಬಿಜೆಬಿ ಹೈಕಮಾಂಡ್ ನಿಂದ ಯಾವುದೇ ಸಂದೇಶ ಬಂದಿಲ್ಲ. ಇವತ್ತು ರಾತ್ರಿಯೊಳಗೆ ಕೇಂದ್ರದ ವರಿಷ್ಠರಿಂದ ಸೂಚನೆ ಬರಲಿದೆ. ನಾಳೆ ಬಿಜೆಪಿ ಅಧಿಕಾರಕ್ಕೆ ಬಂದು 2 ವರ್ಷದ ಸಾಧನಾ ಕಾರ್ಯಕ್ರಮ ನಡೆಯಲಿದೆ. ಆ ಕಾರ್ಯಕ್ರಮದ ಬಳಿಕ ಬಿಜೆಪಿ ವರಿಷ್ಠರು ಏನ್ ತೀರ್ಮಾನ ಕೈಗೊಳ್ಳಲಿದ್ದಾರೋ ಅದಕ್ಕೆ ಬದ್ಧನಾಗಿದ್ದೇನೆ. ಕೇಂದ್ರದ ನಾಯಕರಿಂದ ಇಂದು ರಾತ್ರಿಯೊಳಗೆ ಸೂಚನೆ ಬರೋ ಮುನ್ಸೂಚನೆ ಇದೆ. ಅದು ಬಂದ್ರೆ ಆ ಆದೇಶಕ್ಕೆ ಬದ್ಧನಾಗಿದ್ದೇನೆ ಎಂಬುದಾಗಿ ಹೇಳಿದರು.
Previous Post Next Post