ರಾಜ್ಯದಲ್ಲಿ ಇಂದು 1,001 ಪಾಸಿಟಿವ್, 1465 ಜನರ ಡಿಸ್ಚಾರ್ಜ್, ಪಾಸಿಟಿವಿಟಿ ದರ %0.68

ರಾಜ್ಯದಲ್ಲಿ ಇಂದು 1,001 ಪಾಸಿಟಿವ್,  1465  ಜನರ ಡಿಸ್ಚಾರ್ಜ್, ಪಾಸಿಟಿವಿಟಿ ದರ %0.68


ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇಂದು (ಜುಲೈ 25) ಹೊಸದಾಗಿ 1,001 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 28,94,557 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 28,34,741 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 22 ಜನರ ಸಾವು ಸಂಭವಿಸಿದೆ. ಅದರಂತೆ, ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 36,374 ಜನ ಸಾವನ್ನಪ್ಪಿದ್ದಾರೆ. ಇನ್ನು ಕೊರೊನಾದಿಂದ ಗುಣಮುಖರಾಗಿ ಇಂದು 1465 ಜನ ರಾಜ್ಯದಲ್ಲಿ ಡಿಸ್ಚಾರ್ಜ್ ಆಗಿದ್ದಾರೆ. ಇಂದಿನ ಪಾಸಿಟಿವಿಟಿ ದರ 0.68%. ರಾಜ್ಯದಲ್ಲಿ 23,419 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.ಕೇರಳದಲ್ಲಿ ಇಂದು 17466 ಪಾಸಿಟಿವ್, ಪಾಸಿಟಿವಿಟಿ ದರ 12.3%

ಕೇರಳದಲ್ಲಿ ಇಂದು 17466 ಪಾಸಿಟಿವ್, ಪಾಸಿಟಿವಿಟಿ ದರ 12.3% ಇದೆ. ಸೋಂಕು ದೃಢಪಟ್ಟು ಚಿಕಿತ್ಸೆಯಲ್ಲಿದ್ದ 15,247 ಮಂದಿ ಇಂದು ರೋಗ ಗುಣಮುಖರಾಗಿ ಬಿಡುಗಡೆಯಾದರು.


ಸೂಚನೆ- ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್‌ ಪಡೆಯುವುದನ್ನು ಮರೆಯದಿರಿ. ಇದು ‌'ಈಗಿನ ಸುದ್ದಿ'ಯ ಕಳಕಳಿ


Read More

Previous Post Next Post