ಹಜ್ಜಾಜ್ ಗಳನ್ನು ಸ್ವೀಕರಿಸಲು ಡೇರೆಗಳ ನಗರ ಮಿನಾ ಸಜ್ಜು, ಪವಿತ್ರ ನಗರ ಮಕ್ಕಾದತ್ತ ಅಲ್ಲಾಹನ ಅತಿಥಿಗಳ ಆಗಮನ

ಹಜ್ಜಾಜ್ ಗಳನ್ನು ಸ್ವೀಕರಿಸಲು ಡೇರೆಗಳ ನಗರ ಮಿನಾ ಸಜ್ಜು, ಪವಿತ್ರ ನಗರ ಮಕ್ಕಾದತ್ತ ಅಲ್ಲಾಹನ ಅತಿಥಿಗಳ ಆಗಮನ

 

ಮಕ್ಕಾ |  ಡೇರೆಗಳ ನಗರ ಮಿನಾ ಪವಿತ್ರ ಹಜ್ಜಾಜುಗಳನ್ನು ಸ್ವೀಕರಿಸಲು ಸಜ್ಜಾಗಿದೆ , ಹಜ್ ಆಚರಿಸಲು ಪವಿತ್ರ ಭೂಮಿಯಲ್ಲಿ ಈ ಬಾರಿ 60,000 ಅಲ್ಲಾಹನ ಅತಿಥಿಗಳಿದ್ದಾರೆ. 25,00,000 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿರುವ ಡೇರೆಗಳು ಸಜ್ಜುಗೊಂಡಿದೆ.


ಧುಲ್ ಹಿಜ್ಜಾದ 7 ಮತ್ತು 8 ರಂದು ಹಜ್ಜ್ ಯಾತ್ರಿಕರು ಮಕ್ಕಾ ತಲುಪಲಿದ್ದಾರೆ.  ಇಹ್ರಾಮ್ ಕಾರ್ಯವನ್ನು ಪೂರ್ಣಗೊಳಿಸಿದ ನಂತರ, ಯಾತ್ರಿಕರು ಮಸ್ಜಿದ್-ಉಲ್-ಹರಾಮ್ ತಲುಪುತ್ತಾರೆ ಮತ್ತು ನಿಗದಿತ ಸಮಯದಲ್ಲಿ ತವಾಫ್ ಮಾಡುತ್ತಾರೆ, ಮತ್ತು ಮಿನಾ ಕಡೆಗೆ ಹೋಗುತ್ತಾರೆ.  ಮಿನಾದಲ್ಲಿ ಯಾತ್ರಿಕರು ಈ ಹಿಂದೆ ನಿಗದಿಪಡಿಸಿದ ಡೇರೆಗಳಲ್ಲಿ ಇರಬೇಕಾಗುತ್ತದೆ.  ಮಕ್ಕಾದಿಂದ ಮಿನಾಗೆ, ಮಿನಾದಿಂದ 'ಅರಾಫಾಗೆ ಮತ್ತು' ಅರಾಫಾದಿಂದ ಮುಸ್ದಾಲಿಫಾಗೆ ಪ್ರಯಾಣವನ್ನು ಏರ್ಪಡಿಸುವ ಸಂಪೂರ್ಣ  ಜವಾಬ್ದಾರಿಯನ್ನು ಮುತಾವ್‌ವಿಫ್‌ಗಳು ಹೊಂದಿದ್ದಾರೆ. ಮಿನಾದಲ್ಲಿ ತಂಗುವ ಮೂಲಕ ಈ ವರ್ಷದ ಹಜ್ ಕರ್ಮಕ್ಕೆ ಅಧಿಕೃತ ಚಾಲನೆ ದೊರಕಲಿದೆ.


ಕೋವಿಡ್ ಪ್ರೋಟೋಕಾಲ್ ಪಾಲಿಸಿ ಈ ಬಾರಿ ಕೇವಲ ಅರುವತ್ತು ಸಾವಿರ ಸೌದಿ ನಾಗರಿಕರಿಗೆ ಮತ್ತು ಸೌದಿಯಲ್ಲಿರುವ ಪ್ರವಾಸಿಗಳಿಗೆ ಹಜ್ ಮಾಡಲು ಅವಕಾಶ ಕಲ್ಪಿಸಲಾಗಿದೆ. 


Previous Post Next Post