ಕೊರೊನ ಮಾರ್ಗಸೂಚಿ ಪಾಲಿಸಿ ಈದ್ ಆಚರಿಸಿ: ಖಾಝಿ ಮಾಣಿ ಉಸ್ತಾದ್ ಕರೆ
ಮಂಗಳೂರು : ಸರಕಾರದ ಕೋವಿಡ್ ಮಾರ್ಗಸೂಚಿಯನ್ನು ಪಾಲಿಸುವ ಮೂಲಕ ಈದ್ ನಮಾಝ್ ಹಾಗೂ ಖುತ್ಬಾವನ್ನು ಅಂದು ಬೆಳಗ್ಗೆ ಆದಷ್ಟು ಬೇಗ ನಿರ್ವಹಿಸಲು ಎಲ್ಲಾ ಮೊಹಲ್ಲಾಗಳು ಪ್ರಯತ್ನಿಸಬೇಕು ಎಂದು ಉಡುಪಿ, ಚಿಕ್ಕಮಗಳೂರು, ಹಾಸನ, ಸಂಯುಕ್ತ ಜಮಾಅತ್ ಹಾಗೂ ದ.ಕ. ಜಿಲ್ಲೆಯ ವಿವಿಧ ಮೊಹಲ್ಲಾಗಳ ಖಾಝಿ ಝೈನುಲ್ ಉಲಮಾ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ತಿಳಿಸಿದ್ದಾರೆ.
ಕೊರೋನ ಮಾರ್ಗಸೂಚಿ ಪಾಲಿಸುವುದರೊಂದಿಗೆ ಮಸೀದಿಗಳಲ್ಲಿ ನಮಾಝ್ ನಿರ್ವಹಿಸಲು ಸರಕಾರವು ಅವಕಾಶ ನೀಡಿದೆ. ಯಾವುದೇ ರೋಗ ಲಕ್ಷಣ ಇರುವವರು ಮನೆಯಲ್ಲೇ ನಮಾಝ್ ನಿರ್ವಹಿಸಿ, ಮಸೀದಿಗೆ ಬರುವವರು ಮಾಸ್ಕ್ ಧರಿಸಬೇಕು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು, ಆ ಮೂಲಕ ಈದ್ ಆಚರಿಸಬೇಕು ಎಂದು ಖಾಝಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್/ ಮಾಣಿ ಉಸ್ತಾದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.