ನಾಳೆ ದೇಶಾದ್ಯಂತ ಈದುಲ್ ಅಝ್ ಹಾ ಬಕ್ರೀದ್ ಹಬ್ಬ ಆಚರಣೆ, ಆರೋಗ್ಯ ಜಾಗೃತೆಯೊಂದಿಗೆ ಈದ್ ಆಚರಿಸೋಣ

ನಾಳೆ ದೇಶಾದ್ಯಂತ ಈದುಲ್ ಅಝ್ ಹಾ ಬಕ್ರೀದ್ ಹಬ್ಬ ಆಚರಣೆ, ಆರೋಗ್ಯ ಜಾಗೃತೆಯೊಂದಿಗೆ ಈದ್ ಆಚರಿಸೋಣ

ಜಗತ್ತಿನೆಲ್ಲೆಡೆ ಈದುಲ್ ಅಝ್ ಹಾ ಹಬ್ಬ ಆಚರಿಸಲಾಗುತ್ತಿದೆ. ಬೀವಿ ಹಾಜರ, ಇಸ್ಮಾಈಲ್ ನೆಬಿ, ಇಬ್ರಾಹಿಮ್ ನೆಬಿಯರ ತ್ಯಾಗ ಬಲಿದಾನಗಳನ್ನು ಸ್ಮರಿಸುತ್ತ ಬಕ್ರೀದ್ ಹಬ್ಬಗಳನ್ನು ಆಚರಿಸಲಾಗುತ್ತದೆ. ಅವರ ಆದರ್ಶಗಳು ನಮ್ಮ ಜೀವನದಲ್ಲಿ ಪಾಠವಾಗಲಿ. 


 ಈ ಪುಣ್ಯ ದಿನದಂದು ಎಲ್ಲರೂ ಪರಸ್ಪರ ದ್ವೇಷ ವೈಷಮ್ಯಗಳನ್ನು ಮರೆತು ಪ್ರೀತಿ ಮತ್ತು ಶಾಂತಿಯ ಸಂದೇಶವನ್ನು ಸಾರಿಕೊಂಡು ಕೊವಿಡ್ ಪ್ರೊಟೊಕಾಲ್ ಪಾಲಿಸಿ ಈದ್ ಆಚರಿಸೋಣ. ಸಮಸ್ತ ಜನತೆಗೆ ಈಗಿನ ಸುದ್ದಿಯ ಈದ್ ಶುಭಾಶಯಗಳು



ಕರ್ನಾಟಕದಲ್ಲಿ ಇಂದು 1,464 ಪಾಸಿಟಿವ್,  2706 ಜನರು ಗುಣಮುಖಗೊಂಡು ಡಿಸ್ಚಾರ್ಜ್

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇಂದು (ಜುಲೈ 20) ಹೊಸದಾಗಿ 1,464 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 28,86,702ಕ್ಕೆ ಏರಿಕೆ ಆಗಿದೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 2706 ಜನರು ಗುಣಮುಖಗೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ 28,24,197 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 29 ಜನರ ಸಾವು ಸಂಭವಿಸಿದೆ. ತನ್ಮೂಲಕ ಈವರೆಗೆ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 36,226 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ 26,256 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಈ ಬಗ್ಗೆ ಮಾಹಿತಿ ಲಭ್ಯವಾಗಿದೆ.


ಜಿಲ್ಲಾವಾರು ಕೊರೊನಾ ಸೋಂಕಿತರ ವಿವರ
ಬೆಂಗಳೂರು ನಗರ 352, ದಕ್ಷಿಣ ಕನ್ನಡ ಜಿಲ್ಲೆ 200, ಮೈಸೂರು 117, ಹಾಸನ 108, ಚಿಕ್ಕಮಗಳೂರು 81, ತುಮಕೂರು 86, ಬೆಳಗಾವಿ 75, ಉಡುಪಿ 68, ಶಿವಮೊಗ್ಗ 63, ಕೊಡಗು 56, ಉತ್ತರ ಕನ್ನಡ 53, ಮಂಡ್ಯ 37, ಕೋಲಾರ 36, ಬೆಂಗಳೂರು ಗ್ರಾಮಾಂತರ 35, ಚಾಮರಾಜನಗರ 16, ಧಾರವಾಡ 14, ದಾವಣಗೆರೆ 13, ಚಿತ್ರದುರ್ಗ 11, ಬಳ್ಳಾರಿ 8, ಚಿಕ್ಕಬಳ್ಳಾಪುರ 8, ಕಲಬುರಗಿ 8, ರಾಮನಗರ 4, ವಿಜಯಪುರ 4, ಹಾವೇರಿ 3, ರಾಯಚೂರು 3, ಬೀದರ್ ಜಿಲ್ಲೆ 2, ಬಾಗಲಕೋಟೆ, ಗದಗ, ಯಾದಗಿರಿ ಜಿಲ್ಲೆಯಲ್ಲಿ ತಲಾ 1 ಕೊರೊನಾ ಪ್ರಕರಣಗಳು ಪತ್ತೆಯಾಗಿದೆ.


أحدث أقدم