ಹಜ್ಜ್: ಮೊದಲ ದಿನದ ಕಲ್ಲೆಸತ ಪೂರ್ಣ, ಭಕ್ತಿ ಸಾಂದ್ರತೆಯ ಕರ್ಮಗಳು, ಪವಿತ್ರ ನಗರ ಧನ್ಯವಾಯಿತು

ಹಜ್ಜ್: ಮೊದಲ ದಿನದ ಕಲ್ಲೆಸತ ಪೂರ್ಣ , ಭಕ್ತಿ ಸಾಂದ್ರತೆಯ ಕರ್ಮಗಳು, ಪವಿತ್ರ ನಗರ ಧನ್ಯವಾಯಿತು


ಮಕ್ಕಾ |  ಹಜ್ ಯಾತ್ರಾರ್ಥಿಗಳು ನಿನ್ನೆ ಬೆಳಿಗ್ಗೆ ಮಿನಾದಲ್ಲಿ ಮೊದಲ ದಿನದ ಜಮ್ರಾತುಲ್ ಅಕಾಬಾದಲ್ಲಿ ಕಲ್ಲೆಸೆತ ಕರ್ಮವನ್ನು ಪೂರ್ತಿಗೊಳಿಸಿದರು. ಹಜ್ ನ ಪ್ರಮುಖ ಕರ್ಮವಾದ 'ಅರಾಫಾ ಸಂಗಮದ ನಂತರ ಯಾತ್ರಾರ್ಥಿಗಳು  ಮುಸ್ದಾಲಿಫಾದಲ್ಲಿ ರಾತ್ರಿ ಕಳೆದರು. ಪ್ರಾರ್ಥನೆಗಳ ನಂತರ ಬೆಳಿಗ್ಗೆ ಜಮ್ರಾಕ್ಕೆ ಬಂದರು.


 ಕಲ್ಲು ಎಸೆತದ ನಂತರ ಹಜ್ಜಾಜ್ ಗಳು ಬಲಿದಾನ ನೀಡಿ ಮಾಡಿ ಕಅಬಾಲಯದತ್ತ ಹೋದರು. ನಂತರ ಅವರು ಮಿನಾಗೆ ಮರಳಿದರು. ಯಾತ್ರಿಕರು ಹಜ್ ಮುಗಿಯುವವರೆಗೂ ಮಿನಾದ ಡೇರೆಗಳಲ್ಲಿ ಇರುತ್ತಾರೆ. ಕಲ್ಲುಗಳನ್ನು ಮುಸ್ಡಾಲಿಫಾದಿಂದ ಸಂಗ್ರಹಿಸಲಾಗಿತ್ತು.  ಈ ವರ್ಷ, ಕೋವಿಡ್ ಆರೋಗ್ಯ ರಕ್ಷಣೆಯ ಭಾಗವಾಗಿ, ಜಮ್ರಾಗಳಲ್ಲಿ ಎಸೆಯಲು ಕ್ರಿಮಿನಾಶಕ ಸಿಂಪಡಿಸಿದ ಕಲ್ಲುಗಳನ್ನು ನೀಡಲಾಯಿತು.


ಜನ ದಟ್ಟಣೆ ತಪ್ಪಿಸಲು ಈ ವರ್ಷ ಜಮ್ರಾಕ್ಕೆ ಎಲ್ಲಾ ನಾಲ್ಕು ಪ್ರವೇಶದ್ವಾರಗಳನ್ನು ತೆರೆಯಲಾಯಿತು.  ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ಭಾಗವಾಗಿ, ಪ್ರತಿ ಮುತ್ವಾಹಿಫ್ ಗಳ ಅಡಿಯಲ್ಲಿ ಯಾತ್ರಿಕರಿಗೆ ಬೇರೆ ಬೇರೆ ಸಮಯವನ್ನು ನೀಡುವ ಮೂಲಕ ಜನಸಂದಣಿಯನ್ನು ನಿಯಂತ್ರಿಸಲಾಯಿತು.  ಪ್ರಸ್ತುತ, ಜಮ್ರಾ ಒಂದೇ ಸಮಯದಲ್ಲಿ ಐದು ಲಕ್ಷ ಯಾತ್ರಿಕರನ್ನು ಕಲ್ಲು ಎಸೆಯುವ ಸಾಮರ್ಥ್ಯವನ್ನು ಹೊಂದಿದೆ.  ನಾಲ್ಕು ಅಂತಸ್ತಿನ ಕಟ್ಟಡದ ನಾಲ್ಕು ಮಹಡಿಗಳಲ್ಲಿ ಕಲ್ಲು ಎಸೆಯುವ ಸೌಲಭ್ಯಗಳನ್ನು ಒದಗಿಸಲಾಗಿದೆ.  ಇದು ನಾಲ್ಕು ಮಹಡಿಗಳಲ್ಲಿ 11 ಪ್ರವೇಶದ್ವಾರಗಳನ್ನು ಹೊಂದಿದೆ, 12 ನಿರ್ಗಮನ ದ್ವಾರಗಳು ಮತ್ತು ತುರ್ತು ಪರಿಸ್ಥಿತಿಗಳ ಸಮಯ ರಕ್ಷಣೆಗಾಗಿ ಹೆಲಿಪ್ಯಾಡ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ.


 ಧುಲ್-ಹಿಜ್ಜಾದ 11 ಮತ್ತು 12 ರಂದು ಜಮ್ರಾ, ಅಕಾಬಾ ಮತ್ತು ಜಮ್ರಾತುಲ್ ವುಸ್ತಾದಲ್ಲಿ ಕಲ್ಲು ಎಸೆತ ಪೂರ್ಣಗೊಳ್ಳುವುದರೊಂದಿಗೆ ಈ ವರ್ಷದ ಹಜ್ಜ್ ಯಾತ್ರೆ ಮುಕ್ತಾಯಗೊಳ್ಳಲಿದ್ದು, ಯಾತ್ರಿಕರು ಧುಲ್-ಹಿಜ್ಜಾ 12 ರಂದು ಪವಿತ್ರ ಭೂಮಿಗೆ ವಿದಾಯ ಹೇಳುವರು.


أحدث أقدم