ಸಂಸ್ಥೆಯ ಮುಖ್ಯ ಪೋಷಕರಾದ ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಅಧ್ಯಕ್ಷತೆಯಲ್ಲಿ ಕಾರಂದೂರು ಮರ್ಕಝ್‌ನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಗಿದ್ದು, ಕಾರ್ಯಾಧ್ಯಕ್ಷರಾಗಿ ಹಾಜಿ ಪಿ.ಎಂ.ಅಬ್ದುಲ್ ರಹ್ಮಾನ್ ಅರಿಯಡ್ಕ, ಉಪಾಧ್ಯಕ್ಷರಾಗಿ ಹಾಜಿ ಕೆ.ಎಸ್. ಅಬೂಬಕರ್ ಸಅದಿ ಮಜೂರು, ಸಹ ಕಾರ್ಯದರ್ಶಿಯಾಗಿ ಮುಹಮ್ಮದ್ ಬಶೀರ್ ಇಂದ್ರಾಜೆ, ಆಡಳಿತಾಧಿಕಾರಿಯಾಗಿ ಬಿ.ಕೆ.ರಶೀದ್ ಸಂಪ್ಯ,ಲೆಕ್ಕ ಪರಿಶೋಧಕರಾಗಿ ಹಾಜಿ ಜಿ.ಎಂ.ಅನ್ವರ್ ಹುಸೈನ್ ಗೂಡಿನಬಳಿ.ಹಾಗೂ ಸಂಸ್ಥೆಯ ಇಪ್ಪತ್ತೈದನೆಯ ವಾರ್ಷಿಕದ ಸಿಧ್ದತೆಯ ಭಾಗವಾಗಿ ಮುಂದಿನ ಐದು ವರ್ಷಗಳ ಕಾಲ ‘ಸಿಲ್‌ವರಿಯಂ’ ಎಂಬ ಹೆಸರಿನಲ್ಲಿ ಅಭಿಯಾನ ನಡೆಯಲಿದ್ದು, ಅದರ ನಿರ್ವಹಣಾ ಸಮಿತಿಯ ಅಧ್ಯಕ್ಷರಾಗಿ ಮುಹಮ್ಮದ್ ಹಾಜಿ ಕುಕ್ಕುವಳ್ಳಿ, ಪ್ರಧಾನ ಸಂಚಾಲಕರಾಗಿ ಮುಹಮ್ಮದ್ ಇಖ್‌ಬಾಲ್ ಬಪ್ಪಳಿಗೆ ಹಾಗೂ ಕೋಶಾಧಿಕಾರಿಯಾಗಿ ಅಬ್ದುಲ್ ಹಮೀದ್ ಸುಳ್ಯ ಅವರನ್ನು ಆರಿಸಲಾಗಿದೆ.
ಸಂಸ್ಥೆಗೆ ಶಿಲಾನ್ಯಾಸ ನಡೆದ ಜನವರಿ ಇಪ್ಪತ್ತಾರನೇ ದಿನವನ್ನು ಫೌಂಡೇಶನ್ ಡೇಯಾಗಿ ಆಚರಿಸುವಂತೆ, ಸಂಸ್ಥೆಯ ಉದ್ಘಾಟನೆ ನಡೆದ ಆಗಸ್ಟ್ ಇಪ್ಪತ್ತನ್ನು ಎಜುಕೇಶನ್ ಡೇಯಾಗಿ ಆಚರಿಸಲು ನಿರ್ಧರಿಸಲಾಯಿತು. ಇದೇ ಆಗಸ್ಟ್ ಇಪ್ಪತ್ತರಂದು ಪ್ರಥಮ ‘ಎಜುಕೇಶನ್ ಡೇ’ ಜತೆಗೆ ‘ಸಿಲ್‌ವರಿಯಂ’ ಅಭಿಯಾನದ ಉದ್ಘಾಟನೆ ನಡೆಯಲಿರುವುದು.
ಸಿಲ್‌ವರಿಯಂ ಅಭಿಯಾನದ ಅಂಗವಾಗಿ ಮುಂದಿನ ವರ್ಷ ಗರ್ಲ್ಸ್ ಹೈಸ್ಕೂಲ್ ಸೇರಿದಂತೆ
ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಎಜುಕೇಶನ್ ದಿನದ ಪ್ರಯುಕ್ತ ‘ಮಾಹಿರಾ’ ಪದವೀಧರರಿಗಾಗಿ ಪ್ರಬಂಧ ಸ್ಪರ್ಧೆ ನಡೆಸಲಾಗುವುದು.ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ಝೈನೀ ಸ್ವಾಗತಿಸಿ ಕೋಶಾಧಿಕಾರಿ ಕರೀಂ ಹಾಜಿ ಚೆನ್ನಾರ್ ಧನ್ಯವಾದ ಸಲ್ಲಿಸಿದರು.