ಟೊಕಿಯೊ ಒಲಿಂಪಿಕ್ಸ್ : ಭಾರತಕ್ಕೆ ಮತ್ತೊಂದು ಮೆಡಲ್, ಷಟ್ಲರ್ ಪಿ.ವಿ. ಸಿಂಧುಗೆ ಕಂಚಿನ ಪದಕ

ಟೊಕಿಯೊ ಒಲಿಂಪಿಕ್ಸ್ : ಭಾರತಕ್ಕೆ ಮತ್ತೊಂದು ಮೆಡಲ್, ಷಟ್ಲರ್ ಪಿ.ವಿ. ಸಿಂಧುಗೆ ಕಂಚಿನ ಪದಕ


ಭಾರತದ ಸ್ಟಾರ್ ಷಟ್ಲರ್ ಪಿ.ವಿ. ಸಿಂಧು ಟೊಕಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಚೀನಾದ ಹೀ ಬಿಂಗ್ಜಿಯಾವೊ ಅವರನ್ನು 21- 13, 21-15 ಅಂತರದಿಂದ ಸೋಲಿಸಿದ ಸಿಂಧು ಕಂಚಿನ ಪದಕ ಗೆದ್ದರು.


ಇದರೊಂದಿಗೆ ಭಾರತ ಟೊಕಿಯೋ ಒಲಿಂಪಿಕ್ಸ್ ನಲ್ಲಿ ಎರಡು ಪದಕಗಳನ್ನು ಗಳಿಸಿದಂತಾಗಿದೆ. ವೇಟ್ ಲಿಫ್ಟರ್ ಮೀರಾಬಾಯಿ ಚಾನು ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಪಡೆದಿದ್ದರು.


ಸಿಂಧು ಅವರು ಸುಶೀಲ್ ಕುಮಾರ್ ನಂತರ 2 ವೈಯಕ್ತಿಕ ಒಲಿಂಪಿಕ್ ಪದಕಗಳನ್ನು ಗೆದ್ದ 2 ನೇ ಭಾರತೀಯರಾಗಿದ್ದಾರೆ. ಈ ಸಾಧನೆ ಮಾಡಿದ ದೇಶದ ಮೊದಲ ಮಹಿಳಾ ಕ್ರೀಡಾಪಟು. ಸಿಂಧು ಒಲಿಂಪಿಕ್ ಕ್ರೀಡಾಕೂಟದಲ್ಲಿ ಬ್ಯಾಕ್ ಟು ಬ್ಯಾಕ್ ಪದಕಗಳನ್ನು ಗೆದ್ದ 4 ನೇ ಮಹಿಳಾ ಸಿಂಗಲ್ಸ್ ಆಟಗಾರ್ತಿಯಾಗಿದ್ದಾರೆ. ಅಂದಹಾಗೆ ಪಿವಿ ಸಿಂಧು 2016ರ ರಿಯೋ ಒಲಿಂಪಿಕ್ಸ್​​ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದು ಕೊಟ್ಟಿದ್ದರು. ಇದೀಗ ಕಂಚು ಗೆದ್ದಿದ್ದು ಒಲಿಂಪಿಕ್ಸ್​ನಲ್ಲಿ ಎರಡು ಪದಕಗಳನ್ನು ಪಡೆದ ಏಕೈಕ ಭಾರತೀಯ ಯುವತಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

Previous Post Next Post