ಚಿತ್ರದುರ್ಗದಲ್ಲಿ 'ಸಹಾಯ್' ಪಡಿತರ ಕಿಟ್ ವಿತರಣೆ
ಚಿತ್ರದುರ್ಗ: KCF ಪ್ರಾಯೋಜಕತ್ವದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಆಯೋಜಿಸಿದ 'ಸಹಾಯ್' ಪಡಿತರ ಕಿಟ್ ವಿತರಣಾ ಕಾರ್ಯಕ್ರಮವು SSF ಚಿತ್ರದುರ್ಗ ಜಿಲ್ಲಾ ಸಹಾಯ್ ತಂಡದಿಂದ ಚಿತ್ರದುರ್ಗದಲ್ಲಿ ನಡೆಯಿತು.
ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ ಅಡ್ವೊಕೇಟ್ ಅಬ್ದುಲ್ ಜಲೀಲ್ ಝುಲ್ಫಿಕರ್, ಜಿಲ್ಲಾ ನಾಯಕರಾದ ಫೈರೋಝ್ ಸಾಬ್, ಖಾದರ್ ಭಾಶ ಸಾಬ್, SSF ರಾಜ್ಯ ಸಮಿತಿ ಸದಸ್ಯರು ಎಮ್ಮೆಸ್ಸೆಂ ಜುನೈದ್ ಸಖಾಫಿ, SSF ಜಿಲ್ಲಾಧ್ಯಕ್ಷರು ಮುಹಮ್ಮದ್ ಫೈಝುಲ್ಲಾ ಪಿ, ಪ್ರಧಾನ ಕಾರ್ಯದರ್ಶಿ ಸದ್ದಾಮ್ ಹುಸೇನ್, ಕೊಸಅಧಿಕಾರಿ ಸಾದಿಕುಲ್ಲಾ, ಉಪಾಧ್ಯಕ್ಷರು ಅಬ್ದುಲ್ ಕಾದರ್ ಸಖಾಫಿ, SSF ಮಾಜಿ ರಾಜ್ಯ ಸಮಿತಿ ಸದಸ್ಯರು ಆಸಿಫ್ ರಝ್ವಿ ಚಿತ್ರದುರ್ಗ ಸೇರಿದಂತೆ ಗಣ್ಯ ನಾಯಕರು ಉಪಸ್ಥಿತರಿದ್ದರು.