ಬೆಂಗಳೂರು ಹಿಂದಿಕ್ಕಿ ದಕ್ಷಿಣಕನ್ನಡದಲ್ಲಿಂದು ಅಧಿಕ ಸೋಂಕು, ರಾಜ್ಯದಲ್ಲಿ ಶೇ.0.80% ಪಾಸಿಟಿವಿಟಿ, ಅರ್ಧ ಕರ್ನಾಟಕದಲ್ಲಿ ಹತ್ತಕ್ಕಿಂತ ಕಡಿಮೆ ಸೋಂಕು

ಬೆಂಗಳೂರು ಹಿಂದಿಕ್ಕಿ ದಕ್ಷಿಣಕನ್ನಡದಲ್ಲಿಂದು ಅಧಿಕ ಸೋಂಕು, ರಾಜ್ಯದಲ್ಲಿ ಶೇ.0.80% ಪಾಸಿಟಿವಿಟಿ, ಅರ್ಧ ಕರ್ನಾಟಕದಲ್ಲಿ ಹತ್ತಕ್ಕಿಂತ ಕಡಿಮೆ ಸೋಂಕು 


ಬೆಂಗಳೂರು: ರಾಜ್ಯದಲ್ಲಿ ಇಂದು 1432 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 29,34,624 ಕ್ಕೆ ಏರಿಕೆಯಾಗಿದೆ.


ಇಂದು 1538 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 28,76,377 ಜನ ಗುಣಮುಖರಾಗಿದ್ದಾರೆ. ಇವತ್ತು 27 ಸೋಂಕಿತರು ಮೃತಪಟ್ಟಿದ್ದು, ಇದುವರೆಗೆ 37,088 ಜನ ಮೃತಪಟ್ಟಿದ್ದಾರೆ. ಇವತ್ತು 1,76,977 ಪರೀಕ್ಷೆ ನಡೆಸಲಾಗಿದ್ದು, 21,133 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಶೇಕಡ 0.80 ರಷ್ಟು ಇದೆ.


ಜಿಲ್ಲೆಗಳಲ್ಲಿ ಕೊರೋನಾ ಪ್ರಕರಣ:

ಬಾಗಲಕೋಟೆ 0, ಬಳ್ಳಾರಿ 4, ಬೀದರ್ 1, ಚಾಮರಾಜನಗರ 6, ಚಿಕ್ಕಬಳ್ಳಾಪುರ 6, ಚಿತ್ರದುರ್ಗ 9, ಧಾರವಾಡ 7, ಗದಗ 1, ಹಾವೇರಿ 3, ಕಲ್ಬುರ್ಗಿ 6, ಕೊಪ್ಪಳ 2, ರಾಯಚೂರು 4, ರಾಮನಗರ 5, ವಿಜಯಪುರ 1, ಯಾದಗಿರಿ 0 ಪ್ರಕರಣ ದಾಖಲಾಗಿವೆ.

ಉತ್ತರ ಕನ್ನಡ 42. ಉಡುಪಿ 162, ತುಮಕೂರು 46, ಶಿವಮೊಗ್ಗ 47, ಮೈಸೂರು 103, ಕೊಡಗು 72, ಹಾಸನ 94, ದಕ್ಷಿಣಕನ್ನಡ 326, ಬೆಂಗಳೂರು ನಗರ 318, ಬೆಳಗಾವಿ 46 ಪ್ರಕರಣ ವರದಿಯಾಗಿದೆ.Previous Post Next Post