ರಾಜ್ಯದಲ್ಲಿ ಇಂದು ಶೇಕಡ 0.83 ಪಾಸಿಟಿವಿಟಿ ದರ, 18 ಜಿಲ್ಲೆಗಳಲ್ಲಿ ಹತ್ತು ಹತ್ತಕ್ಕಿಂತ ಕಡಿಮೆ ಪಾಸಿಟಿವ್, ಬೆಂಗಳೂರು ಮತ್ತು ದ.ಕ ದಲ್ಲಿ ಮುಂದುವರಿದ ಕೊವಿಡ್ ಕಾಟ

ರಾಜ್ಯದಲ್ಲಿ ಇಂದು ಶೇಕಡ 0.83 ಪಾಸಿಟಿವಿಟಿ ದರ, 18 ಜಿಲ್ಲೆಗಳಲ್ಲಿ ಹತ್ತು ಹತ್ತಕ್ಕಿಂತ ಕಡಿಮೆ ಪಾಸಿಟಿವ್


ಬೆಂಗಳೂರು: ರಾಜ್ಯದಲ್ಲಿ ಇವತ್ತು 1453 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,36,077 ಕ್ಕೆ ಏರಿಕೆಯಾಗಿದೆ.


ಇದುವರೆಗೆ 28,77,785 ಜನ ಗುಣಮುಖರಾಗಿದ್ದು, 37,105 ಸೋಂಕಿತರು ಸಾವನ್ನಪ್ಪಿದ್ದಾರೆ. ಇಂದು 1408 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 17 ಸೋಂಕಿತರು ಸಾವನ್ನಪ್ಪಿದ್ದಾರೆ. ಪಾಸಿಟಿವಿಟಿ ದರ ಶೇಕಡ 0.83 ರಷ್ಟು ಇದೆ. ಇವತ್ತು 1,73,000 ಪರೀಕ್ಷೆ ನಡೆಸಲಾಗಿದೆ. 21,161 ಸಕ್ರಿಯ ಪ್ರಕರಣಗಳು ಇವೆ.


ಜಿಲ್ಲೆಗಳಲ್ಲಿನ ಹೊಸ ಪ್ರಕರಣಗಳ ಸಂಖ್ಯೆ:

ಬಾಗಲಕೋಟೆ 3, ಬಳ್ಳಾರಿ 1, ಬೆಂಗಳೂರು ಗ್ರಾಮಾಂತರ 7, ಬೀದರ್ 3, ಚಾಮರಾಜನಗರ 0, ಚಿಕ್ಕಬಳ್ಳಾಪುರ 9, ಚಿತ್ರದುರ್ಗ 9, ಧಾರವಾಡ 4, ಗದಗ 2, ಹಾವೇರಿ 1, ಕಲ್ಬುರ್ಗಿ 3, ಕೊಪ್ಪಳ 2, ರಾಯಚೂರು 4, ರಾಮನಗರ 2, ವಿಜಯಪುರ 1 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 1 ಪ್ರಕರಣ ವರದಿಯಾಗಿದೆ.


ಉತ್ತರಕನ್ನಡ 40, ಉಡುಪಿ 176, ಶಿವಮೊಗ್ಗ 53, ಮೈಸೂರು 87, ಕೊಡಗು 95, ಹಾಸನ 101, ದಕ್ಷಿಣಕನ್ನಡ 341, ಚಿಕ್ಕಮಗಳೂರು 45, ಬೆಂಗಳೂರು ನಗರ 352, ಬೆಳಗಾವಿ 46 ಜನರಿಗೆ ಸೋಂಕು ತಗುಲಿದೆ





ಈಗಿನ ಸುದ್ದಿ'ಯ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಬಗ್ಗೆ ಎಚ್ಚರ ಅತೀ ಅಗತ್ಯ . ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.


ಮುಂದೆ ಓದಿ

Previous Post Next Post