ರಾಜ್ಯದಲ್ಲಿ ಇಂದು 1298 ಪಾಸಿಟಿವ್, 1833 ಗುಣಮುಖರು,14 ಜಿಲ್ಲೆಗಳಲ್ಲಿ 10ಕ್ಕಿಂತ ಕಡಿಮೆ ಪಾಸಿಟಿವ್

ರಾಜ್ಯದಲ್ಲಿ ಇಂದು 1298 ಪಾಸಿಟಿವ್, 1833 ಗುಣಮುಖರು

14 ಜಿಲ್ಲೆಗಳಲ್ಲಿ 10ಕ್ಕಿಂತ ಕಡಿಮೆ ಪಾಸಿಟಿವ್ 


ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1298 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 29,31,827 ಕ್ಕೆ ಏರಿಕೆಯಾಗಿದೆ. ಇವತ್ತು ಒಂದೇ ದಿನ 1833 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 28,73,281 ಜನ ಗುಣಮುಖರಾಗಿದ್ದಾರೆ. ಇಂದು 32 ಮಂದಿ ಸೋಂಕಿತರು ಮೃತಪಟ್ಟಿದ್ದು, ಇದುವರೆಗೆ 37,039 ಸೋಂಕಿತರು ಸಾವನ್ನಪ್ಪಿದ್ದಾರೆ.


21,481 ಸಕ್ರಿಯ ಪ್ರಕರಣಗಳು ಇವೆ. ಪಾಸಿಟಿವಿಟಿ ದರ ಶೇಕಡ 1.01 ರಷ್ಟು ಇದೆ. ರಾಜಧಾನಿ ಬೆಂಗಳೂರಿನಲ್ಲಿ ಇಂದು ಹೊಸದಾಗಿ 340 ಜನರಿಗೆ ಸೋಂಕು ತಗುಲಿದೆ. 10 ಜನ ಮೃತಪಟ್ಟಿದ್ದಾರೆ. 471 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, 7913 ಸಕ್ರಿಯ ಪ್ರಕರಣಗಳು ಇವೆ.


ಜಿಲ್ಲೆಗಳ ಮಾಹಿತಿ:

ಬಾಗಲಕೋಟೆ 0, ಬಳ್ಳಾರಿ 5, ಬಿದರ್ 0, ಚಾಮರಾಜನಗರ 7, ಚಿಕ್ಕಬಳ್ಳಾಪುರ 2, ಚಿತ್ರದುರ್ಗ 7, ಧಾರವಾಡ 5, ಗದಗ 1, ಹಾವೇರಿ 1, ಕಲ್ಬುರ್ಗಿ 4, ಕೊಪ್ಪಳ 1, ರಾಯಚೂರು 0, ರಾಮನಗರ 3, ವಿಜಯಪುರ 2, ಯಾದಗಿರಿ 3 ಪ್ರಕರಣ ವರದಿಯಾಗಿವೆ. ಬೆಂಗಳೂರು ನಗರ 340, ಚಿಕ್ಕಮಗಳೂರು 59, ದಕ್ಷಿಣಕನ್ನಡ 288, ಹಾಸನ 66, ಮೈಸೂರು 88, ಶಿವಮೊಗ್ಗ 51, ತುಮಕೂರು 52, ಉಡುಪಿ 122, ಉತ್ತರಕನ್ನಡ 48 ಜನರಿಗೆ ಸೋಂಕು ತಗುಲಿದೆ

Previous Post Next Post