ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು SSF ಚಿತ್ರದುರ್ಗ, ನೆಹರು ಯುವ ಕೇಂದ್ರ, ರೋಟರಿ ಕ್ಲಬ್ ಚಿನ್ಮೂಲಾದ್ರಿ ವತಿಯಿಂದ ಉಚಿತ ಲಸಿಕೆ ವಿತರಣೆ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು SSF ಚಿತ್ರದುರ್ಗ, ನೆಹರು ಯುವ ಕೇಂದ್ರ, ರೋಟರಿ ಕ್ಲಬ್ ಚಿನ್ಮೂಲಾದ್ರಿ ವತಿಯಿಂದ ಉಚಿತ ಲಸಿಕೆ ವಿತರಣೆ  


ಚಿತ್ರದುರ್ಗ: (ಆಗಸ್ಟ್16) ನಗರದ ಹೊರಪೇಟೆಯಲ್ಲಿರುವ ವಾರ್ಡ್‍ನಂ.26ರ ಅಂಜುಮನ್ ಸರ್ಕಲ್‍ನಲ್ಲಿ ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, SSF (ಸುನ್ನಿ ಸ್ಟುಡೆಂಟ್ ಫೆಡರೇಶನ್) ಚಿತ್ರದುರ್ಗ ಜಿಲ್ಲಾ ಸಮಿತಿ, ನೆಹರು ಯುವ ಕೇಂದ್ರ, ರೋಟರಿ ಕ್ಲಬ್ ಚಿನ್ಮೂಲಾದ್ರಿ ವತಿಯಿಂದ ಉಚಿತ ಕೋವಿಡ್-19 ಲಸಿಕಾ ಕಾರ್ಯಕ್ರಮ ನಡೆಯಿತು.


ಕೌನ್ಸಿಲರ್ಸ್ ಮುಹಮ್ಮದ್ ಅಹ್ಮದ್ ಪಾಶಾ (ಸರ್ದಾರ್), ನಸ್ರುಲ್ಲಾ, ಜೈನುಲ್ಲಾಬಿದೀನ್, ಫಕ್ರುದ್ದೀನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎ ಗಂಗಾದರ (ಆರೋಗ್ಯ ನಿರೀಕ್ಷ ಣಾಧಿಕಾರಿ) ರೆಡ್ ಕ್ರಾಸ್ ಜಿಲ್ಲಾ ಚೇರ್ಮೇನ್ ಮಹೇಂದರ್ ಕುಮಾರ್, ಸೆಕ್ರೆಟರಿ ಮಝ್ಹರ್ ಉಲ್ಲಾ, ನೆಹರು ಯುವಕ ಕೇಂದ್ರದ ಸುಹಾಸ್, ಅರೂಣ್ ಕುಮಾರ್, ಖಾದರ್ ಬಾಷಾ, SSF ಜಿಲ್ಲಾ ಡೈರೆಕ್ಟರ್ ಅಡ್ವೊಕೇಟ್ ಝುಲ್ಫೀಕರ್, SSF ರಾಜ್ಯ ಸಮಿತಿ ಸದಸ್ಯರು ಎಮ್ಮೆಸ್ಸೆಂ ಜುನೈದ್ ಸಖಾಫಿ, ಜಿಲ್ಲಾಧ್ಯಕ್ಷರು ಫೈಝುಲ್ಲಾ, ಪ್ರಧಾನ ಕಾರ್ಯದರ್ಶಿ ಸದ್ದಾಂ ಹುಸೈನ್, ಉಪಾಧ್ಯಕ್ಷರು ಅಬ್ದುಲ್ ಖಾದರ್ ಸಖಾಫಿ, ಕಾರ್ಯದರ್ಶಿ ಶಂಸುದ್ದೀನ್, ಹೆಚ್ ಎಸ್ ಮಹಮ್ಮದ್ ಆಸಿಫ್, ಮೊದಲಾದವರು ಭಾಗವಹಿಸಿದರು.


ಸುಮಾರು 548 ಮಂದಿಗೆ ಕೊವಿಡ್ ಲಸಿಕೆ ಹಾಕಲಾಯಿತು ಮತ್ತು 240 ಮಂದಿಯ ಕೊವಿಡ್ ಟೆಸ್ಟ್‌ ನಡೆಸಲಾಯಿತು.

Previous Post Next Post