ರಾಜ್ಯದಲ್ಲಿ ಇಂದು 1598 ಪಾಸಿಟಿವ್ , 1914 ಗುಣಮುಖರು

ರಾಜ್ಯದಲ್ಲಿ ಇಂದು 1598 ಪಾಸಿಟಿವ್ , 1914 ಗುಣಮುಖರು


ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1598 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, 20 ಸೋಂಕಿತರು ಮೃತಪಟ್ಟಿದ್ದಾರೆ. 1914 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.


ಒಟ್ಟು ಸೋಂಕಿತರ ಸಂಖ್ಯೆ 29,18,525 ಕ್ಕೆ ಏರಿಕೆಯಾಗಿದೆ. ಇದುವರೆಗೆ 36,793 ಸೋಂಕಿತರು ಸಾವನ್ನಪ್ಪಿದ್ದಾರೆ. 28,57,776 ಜನ ಇದುವರೆಗೆ ಗುಣಮುಖರಾಗಿದ್ದಾರೆ. 23,930 ಸಕ್ರಿಯ ಪ್ರಕರಣಗಳು ಇವೆ.ಪಾಸಿಟಿವಿಟಿ ದರ ಶೇಕಡ 1.09 ರಷ್ಟು ಇದೆ.


ಜಿಲ್ಲೆಗಳ ವಿವರ:

ಬಾಗಲಕೋಟೆ 2, ಬೀದರ್ 2, ಧಾರವಾಡ 7, ಗದಗ 1, ಹಾವೇರಿ 2, ಕಲಬುರ್ಗಿ 5, ಕೊಪ್ಪಳ 7, ರಾಯಚೂರು 4, ರಾಮನಗರ 0, ವಿಜಯಪುರ 1, ಯಾದಗಿರಿ ಜಿಲ್ಲೆಯಲ್ಲಿ 1 ಪ್ರಕರಣ ವರದಿಯಾಗಿದೆ. ಉಡುಪಿ 129, ಮೈಸೂರು 98, ಕೊಡಗು 83, ಹಾಸನ 80, ದಕ್ಷಿಣ ಕನ್ನಡ 438, ಬೆಂಗಳೂರು ನಗರ 348 ಪ್ರಕರಣಗಳು ಪತ್ತೆಯಾಗಿವೆ.


Previous Post Next Post