ಹನ್ನೆರಡು ಜಿಲ್ಲೆಗಳಲ್ಲಿ ಹತ್ತಕ್ಕಿಂತ ಕಡಿಮೆ ಪಾಸಿಟಿವ್, ಗಡಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಮುಂದುವರಿದ ಕೊರೊನ ಕಾರುಬಾರು, ರಾಜ್ಯದಲ್ಲಿ ಇಂದು 1632 ಪಾಸಿಟಿವ್

ಹನ್ನೆರಡು ಜಿಲ್ಲೆಗಳಲ್ಲಿ ಹತ್ತಕ್ಕಿಂತ ಕಡಿಮೆ ಪಾಸಿಟಿವ್, ಗಡಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಮುಂದುವರಿದ ಕೊರೊನ ಕಾರುಬಾರು, ರಾಜ್ಯದಲ್ಲಿ ಇಂದು 1632 ಪಾಸಿಟಿವ್ 


ಬೆಂಗಳೂರು: ಕರ್ನಾಟಕದಲ್ಲಿ ಶನಿವಾರ ಒಟ್ಟು 1632 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 25 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 1612 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್​ಚಾರ್ಜ್ ಅಗಿದ್ದಾರೆ. 


ಕರ್ನಾಟಕದಲ್ಲಿ ಈವರೆಗೆ 29,28,033 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 28,68,351 ಮಂದಿ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಒಟ್ಟು 22,698 ಸಕ್ರಿಯ ಪ್ರಕರಣಗಳಿವೆ. ಈವರೆಗೆ 36,958 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ರಾಜ್ಯದ ಪಾಸಿಟಿವಿಟಿ ಸರಾಸರಿಯು ಶೇ 1.04 ಇದ್ದರೆ, ಕೊವಿಡ್ ಸೋಂಕಿತರ ಸಾವಿನ ಸರಾಸರಿ ಶೇ 1.53 ಇದೆ.


ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ಇಂದೂ ಸಹ ದಕ್ಷಿಣ ಜಿಲ್ಲೆಯಲ್ಲಿಯೇ ಅತಿಹೆಚ್ಚು ಮಂದಿಗೆ 411 ಜನರಲ್ಲಿ ಸೋಂಕು ದೃಢಪಟ್ಟಿದೆ. ನಂತರದ ಸ್ಥಾನದಲ್ಲಿ ಬೆಂಗಳೂರು ನಗರ (377) ಇದೆ. ಉಳಿದಂತೆ ಉಡುಪಿ 169, ಮೈಸೂರು 112, ಹಾಸನ 97, ಬೆಳಗಾವಿ 41, ಬೆಂಗಳೂರು ಗ್ರಾಮಾಂತರ 14, ಚಾಮರಾಜನಗರ 17, ಚಿಕ್ಕಬಳ್ಳಾಪುರ 8, ಚಿಕ್ಕಮಗಳೂರು 53, ಚಿತ್ರದುರ್ಗ 22, ದಾವಣಗೆರೆ 5, ರಾಯಚೂರು, ಹಾವೇರಿ 1, ಕೊಪ್ಪಳ, ಧಾರವಾಡ, ಕಲಬುರಗಿ 3, ಕೊಡಗು 77, ಕೋಲಾರ 18, ರಾಮನಗರ,, ಮಂಡ್ಯ 39, ಶಿವಮೊಗ್ಗ 60, ತುಮಕೂರು 43, ಉತ್ತರ ಕನ್ನಡ 49, ಬಾಗಲಕೋಟೆ, ವಿಜಯಪುರ ಮತ್ತು ಬಳ್ಳಾರಿ ತಲಾ 2


ಕೇರಳದಲ್ಲಿ ಇಂದು 19,451 ಪಾಸಿಟಿವ್, 19,104 ಗುಣಮುಖರು


ಕೇರಳದಲ್ಲಿ ಇಂದು 19,451 ಪಾಸಿಟಿವ್ ದೃಡಪಟ್ಟಿದೆ. ಕಳೆದ 24 ಗಂಟೆಯಲ್ಲಿ 1,39,223 ಸ್ಯಾಂಪಲ್‌ ಪರೀಕ್ಷೆ ಮಾಡಲಾಗಿದ್ದು ಟೆಸ್ಟ್ ಪಾಸಿಟಿವಿಟಿ 13.97% ಇದೆ. ಚಿಕಿತ್ಸೆಯಲ್ಲಿದ್ದ 19,104 ಮಂದಿ ಇಂದು ರೋಗ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು. ಇನ್ನು ರಾಜ್ಯದಲ್ಲಿ 1,80,240 ಸಕ್ರಿಯ ಪ್ರಕರಣಗಳು ಇವೆ.


ಕೇರಳದಲ್ಲಿ ಕೊರೋನಾ ಏರಿಕೆ: ಕೇಂದ್ರ ಆರೋಗ್ಯ ಸಚಿವರು ಕೇರಳ 16 ಕ್ಕೆ


ನವದೆಹಲಿ, ಆಗಸ್ಟ್ 14: ಕೇರಳದಲ್ಲಿ ಕೊರೊನಾ ಪ್ರಕರಣಗಳು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ರಾಜ್ಯದ ಕೊರೊನಾ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಆಗಸ್ಟ್ 16ರಂದು ಭೇಟಿ ನೀಡಲಿದ್ದಾರೆ.


ಕೇರಳ ಸಿಎಂ ಪಿಣರಾಯಿ ವಿಜಯನ್ ಹಾಗೂ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರನ್ನು ಭೇಟಿ ಮಾಡಿ ರಾಜ್ಯದ ಕೊರೊನಾ ಪರಿಸ್ಥಿತಿ ಕುರಿತು ವಿಶ್ಲೇಷಣೆ ನಡೆಸಲಿದ್ದಾರೆ. ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ನಿರ್ದೇಶಕರು ಹಾಗೂ ಆರೋಗ್ಯ ಸಚಿವಾಲಯದ ಇನ್ನಿತರೆ ಅಧಿಕಾರಿಗಳು ಮಾಂಡವಿಯಾ ಅವರೊಂದಿಗೆ ಕೇರಳಕ್ಕೆ ತೆರಳುವುದಾಗಿ ಮೂಲಗಳು ತಿಳಿಸಿವೆ.


Read More ಮುಂದೆ ಓದಿ

Previous Post Next Post