ರಾಜ್ಯದಲ್ಲಿ ಇಂದು 1,769 ಪಾಸಿಟಿವ್, 1,714 ಗುಣಮುಖರು

ರಾಜ್ಯದಲ್ಲಿ ಇಂದು 1,769 ಪಾಸಿಟಿವ್, 1,714 ಗುಣಮುಖರು


ಬೆಂಗಳೂರು: ರಾಜ್ಯದಲ್ಲಿ ಬುಧವಾರ 1,769 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 30 ಜನರು ಸೋಂಕಿಗೆ ಬಲಿಯಾಗಿದ್ದು, 1,714 ಜನರು ಗುಣಮುಖರಾಗಿದ್ದಾರೆ.


ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 29,11,727ಕ್ಕೆ ತಲುಪಿದೆ. ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 36,680ಕ್ಕೆ ತಲುಪಿದೆ.
ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 24,305 ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ. ಪಾಸಿಟಿವಿಟಿ ದರ ಶೇಕಡ 1.04 ರಷ್ಟು ಇದೆ.


ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 1,769 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 6, ಬಳ್ಳಾರಿ 9, ಬೆಳಗಾವಿ 31, ಬೆಂಗಳೂರು ಗ್ರಾಮಾಂತರ 22, ಬೆಂಗಳೂರು ನಗರ 411, ಬೀದರ್ 2, ಚಾಮರಾಜನಗರ 33, ಚಿಕ್ಕಬಳ್ಳಾಪುರ 7, ಚಿಕ್ಕಮಗಳೂರು 67, ಚಿತ್ರದುರ್ಗ 25, ದಕ್ಷಿಣ ಕನ್ನಡ 350, ದಾವಣಗೆರೆ 10, ಧಾರವಾಡ 8, ಗದಗ 1, ಹಾಸನ 112, ಕಲಬುರಗಿ 2, ಕೊಡಗು 99, ಕೋಲಾರ 49, ಕೊಪ್ಪಳ 3, ಮಂಡ್ಯ 43, ಮೈಸೂರು 143, ರಾಯಚೂರು 1, ರಾಮನಗರ 10, ಶಿವಮೊಗ್ಗ 38, ತುಮಕೂರು 53, ಉಡುಪಿ 140, ಉತ್ತರ ಕನ್ನಡ 86, ವಿಜಯಪುರ ಜಿಲ್ಲೆಯಲ್ಲಿ 8 ಪ್ರಕರಣ ಪತ್ತೆಯಾಗಿವೆ.


ಕೇರಳದಲ್ಲಿ ಇಂದು 22,414 ಪಾಸಿಟಿವ್, 19,478 ಗುಣಮುಖರು


ಕೇರಳದಲ್ಲಿ ಇಂದು 22,414 ಪಾಸಿಟಿವ್ ದೃಡಪಟ್ಟಿದೆ. ಕಳೆದ 24 ಗಂಟೆಯಲ್ಲಿ 1,97,092 ಸ್ಯಾಂಪಲ್‌ ಪರೀಕ್ಷೆ ಮಾಡಲಾಗಿದ್ದು ಟೆಸ್ಟ್ ಪಾಸಿಟಿವಿಟಿ 11.37% ಇದೆ. ಚಿಕಿತ್ಸೆಯಲ್ಲಿದ್ದ 19,478 ಮಂದಿ ಇಂದು ರೋಗ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು. ಇನ್ನು ರಾಜ್ಯದಲ್ಲಿ 1,76,048 ಸಕ್ರಿಯ ಪ್ರಕರಣಗಳು ಇವೆ.

أحدث أقدم