ರಾಜ್ಯದಲ್ಲಿ ಇಂದು 1805 ಪಾಸಿಟಿವ್, 1854 ಗುಣಮುಖರು

ರಾಜ್ಯದಲ್ಲಿ ಇಂದು 1805 ಪಾಸಿಟಿವ್, 1854 ಗುಣಮುಖರು


ಬೆಂಗಳೂರು : ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 1805 ಕೋವಿಡ್ ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 36 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು (ಆ.6) ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.


ಇನ್ನು 1854 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 24328 ಇದೆ.


ಕೋವಿಡ್ 19 ಸೋಂಕಿನ ಖಚಿತ ಪ್ರಕರಣಗಳ ಶೇಕಡಾವಾರು ಪ್ರಮಾಣ 1.11 % ಹಾಗೂ ಕೋವಿಡ್ -19 ಸೋಂಕಿನಿಂದ ಮೃತ ಪಟ್ಟವರ ಶೇಕಡಾವಾರು ಪ್ರಮಾಣ 1.99 % ಇದೆ ಎಂದು ವರದಿಗಳು ತಿಳಿಸಿವೆ.


ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-0, ಬಳ್ಳಾರಿ-4, ಬೆಳಗಾವಿ-53, ಬೆಂಗಳೂರು ಗ್ರಾಮಾಂತರ-28, ಬೆಂಗಳೂರು ನಗರ-441, ಬೀದರ್-1, ಚಾಮರಾಜನಗರ-30, ಚಿಕ್ಕಬಳ್ಳಾಪುರ-7, ಚಿಕ್ಕಮಗಳೂರು-69, ಚಿತ್ರದುರ್ಗ-12, ದಕ್ಷಿಣ ಕನ್ನಡ-411, ದಾವಣಗೆರೆ-3. ಧಾರವಾಡ-8, ಗದಗ-0, ಹಾಸನ-103, ಹಾವೇರಿ-1, ಕಲಬುರಗಿ-17, ಕೊಡಗು-79, ಕೋಲಾರ-45, ಕೊಪ್ಪಳ-2, ಮಂಡ್ಯ-45, ಮೈಸೂರು-90, ರಾಯಚೂರು-5, ರಾಮನಗರ-6, ಶಿವಮೊಗ್ಗ-70, ತುಮಕೂರು-58, ಉಡುಪಿ-153, ಉತ್ತರ ಕನ್ನಡ-59, ವಿಜಯಪುರ-5, ಯಾದಗಿರಿ-0.


ಕೇರಳದಲ್ಲಿ ಇಂದು 19,948  ಪಾಸಿಟಿವ್, 19,480 ಗುಣಮುಖರು


ಕೇರಳದಲ್ಲಿ ಇಂದು 19,948 ಪಾಸಿಟಿವ್ ದೃಡಪಟ್ಟಿದೆ. ಕಳೆದ 24 ಗಂಟೆಯಲ್ಲಿ 1,51,892 ಸ್ಯಾಂಪಲ್‌ ಪರೀಕ್ಷೆ ಮಾಡಲಾಗಿದ್ದು ಟೆಸ್ಟ್ ಪಾಸಿಟಿವಿಟಿ 13.13% ಇದೆ. ಚಿಕಿತ್ಸೆಯಲ್ಲಿದ್ದ 19,480 ಮಂದಿ ಇಂದು ರೋಗ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು. ಇನ್ನು ರಾಜ್ಯದಲ್ಲಿ 1,78,204 ಸಕ್ರಿಯ ಪ್ರಕರಣಗಳು ಇವೆ.

Previous Post Next Post