ಇಂದು 1,83,642 ಪರೀಕ್ಷೆ, 1229 ಪಾಸಿಟಿವ್, ಪಾಸಿಟಿವಿಟಿ ದರ ಶೇಕಡ 0.66

ಇಂದು 1,83,642 ಪರೀಕ್ಷೆ, 1229 ಪಾಸಿಟಿವ್, ಪಾಸಿಟಿವಿಟಿ ದರ ಶೇಕಡ 0.66 


ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1229 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,45,993 ಕ್ಕೆ ಏರಿಕೆಯಾಗಿದೆ. ಇಂದು 1289 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 28,89,809 ಜನ ಗುಣಮುಖರಾಗಿದ್ದಾರೆ.


13 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಇದುವರೆಗೆ 37,261 ಜನ ಸಾವನ್ನಪ್ಪಿದ್ದಾರೆ. ಪಾಸಿಟಿವಿಟಿ ದರ ಶೇಕಡ 0.66 ರಷ್ಟು ಇದೆ. ಇವತ್ತು 1,83,642 ಪರೀಕ್ಷೆ ನಡೆಸಲಾಗಿದೆ. ರಾಜ್ಯದಲ್ಲಿ 18,897 ಸಕ್ರಿಯ ಪ್ರಕರಣಗಳು ಇವೆ.


ಜಿಲ್ಲಾವಾರು ಸೋಂಕಿತರ ವಿವರ

ಬೆಂಗಳೂರು 310, ದಕ್ಷಿಣಕನ್ನಡ 207, ಹಾಸನ 103, ಕೊಡಗು 75, ಮೈಸೂರು 82, ಶಿವಮೊಗ್ಗ 42, ತುಮಕೂರು 44, ಉಡುಪಿ 146, ಉತ್ತರಕನ್ನಡ 42 ಪ್ರಕರಣ ವರದಿಯಾಗಿದೆ.

ಬಾಗಲಕೋಟೆ 0, ಬಳ್ಳಾರಿ 5, ಬೀದರ್ 0, ಚಾಮರಾಜನಗರ 7, ಚಿಕ್ಕಬಳ್ಳಾಪುರ 4, ಧಾರವಾಡ 7, ಗದಗ 2, ಹಾವೇರಿ 3, ಕಲಬುರ್ಗಿ 2, ಕೊಪ್ಪಳ 2, ರಾಯಚೂರು 0, ರಾಮನಗರ 3, ವಿಜಯಪುರ 1, ಯಾದಗಿರಿ 0 ಪ್ರಕರಣ ವರದಿಯಾಗಿದೆ.



ಕೋವಿಡ್ ಹೆಚ್ಚಳ: ಕೇರಳದಲ್ಲಿ ನೈಟ್ ಕರ್ಫ್ಯೂ ಜಾರಿ ಸಿಎಂ ಆದೇಶ 


ಕೇರಳ : ಕೇರಳದಲ್ಲಿ ಆ.30 ರಿಂದ ನೈಟ್ ಕರ್ಪ್ಯೂ ಜಾರಿಗೊಳಿಸಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆದೇಶ ಹೊರಡಿಸಿದ್ದಾರೆ.


ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಮುಂದಿನ ವಾರದಿಂದ ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ರಾತ್ರಿ ಕರ್ಫ್ಯೂ ವಿಧಿಸಲು ನಿರ್ಧರಿಸಲಾಯಿತು.


ಕೇರಳದಲ್ಲಿ ಇಂದು 31,265 ಪಾಸಿಟಿವ್, 21,468 ಗುಣಮುಖರು


ಕೇರಳದಲ್ಲಿ ಇಂದು 31,265 ಪಾಸಿಟಿವ್ ದೃಡಪಟ್ಟಿದೆ. ಕಳೆದ 24 ಗಂಟೆಯಲ್ಲಿ 1,67,497 ಸ್ಯಾಂಪಲ್‌ ಪರೀಕ್ಷೆ ಮಾಡಲಾಗಿದ್ದು ಟೆಸ್ಟ್ ಪಾಸಿಟಿವಿಟಿ 18.67% ಇದೆ. ಚಿಕಿತ್ಸೆಯಲ್ಲಿದ್ದ 21,468 ಮಂದಿ ಇಂದು ರೋಗ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು. ಇನ್ನು ರಾಜ್ಯದಲ್ಲಿ 2,04,896 ಸಕ್ರಿಯ ಪ್ರಕರಣಗಳು ಇವೆ.

أحدث أقدم