ರಾಜ್ಯದಲ್ಲಿ ಇಂದು 1,95,966 ಕೋವಿಡ್ ಟೆಸ್ಟ್, 1,224 ಪಾಸಿಟಿವ್, ಪಾಸಿಟಿವಿಟಿ ದರ ಶೇ. 0.62

ರಾಜ್ಯದಲ್ಲಿ ಇಂದು 1,95,966 ಕೋವಿಡ್ ಟೆಸ್ಟ್, 1,224 ಪಾಸಿಟಿವ್, ಪಾಸಿಟಿವಿಟಿ ದರ ಶೇ. 0.62


ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಇಳಿಕೆಯಾಗಿದೆ. ಇಂದು 1,224 ಕೊರೋನ ಪ್ರಕರಣಗಳು ವರದಿಯಾಗಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ 29,42,250ಕ್ಕೆ ಏರಿಕೆಯಾಗಿದೆ.


ಕಳೆದ 24 ಗಂಟೆಯಲ್ಲಿ ಮಹಾಮಾರಿಗೆ 22 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 37,206ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಪ್ರಕಟಿಸಿದೆ. 


ರಾಜ್ಯದಲ್ಲಿ ಇಂದು 1,668 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 28,85,700ಕ್ಕೆ ಏರಿಕೆಯಾಗಿದೆ. ಇನ್ನು 19,318 ಸಕ್ರೀಯ ಪ್ರಕರಣಗಳಿವೆ.


ರಾಜ್ಯಾದ್ಯಂತ ಇಂದು 1,95,966 ಕೋವಿಡ್ ಟೆಸ್ಟ್ ನಡೆಸಲಾಗಿದ್ದು, 1,224 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 0.62ಕ್ಕೆ ಇಳಿದಿದೆ.


ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ಬೆಂಗಳೂರು ನಗರ 309, ದಕ್ಷಿಣ ಕನ್ನಡ 217, ಉಡುಪಿ 130, ಮೈಸೂರು 102, ಹಾಸನ 95, ತುಮಕೂರು 52, ಉತ್ತರ ಕನ್ನಡ 48, ಕೊಡಗು 41, ಶಿವಮೊಗ್ಗ 42, ಮಂಡ್ಯ 38, ಚಿಕ್ಕಮಗಳೂರು 28, ಬೆಳಗಾವಿ 19, ಕೋಲಾರ 17, ಬೆಂಗಳೂರು ಗ್ರಾಮಾಂತರ 13, ಧಾರವಾಡ 11, ಚಿತ್ರದುರ್ಗ, ಕಲಬುರಗಿ 10, ಯಾದಗಿರಿ 8, ಚಾಮರಾನಗರ 6, ಬಳ್ಳಾರಿ, ಹಾವೇರಿ, ವಿಜಯಪುರ, ದಾವಣಗೆರೆ 3, ಚಿಕ್ಕಬಳ್ಳಾಪುರ, ಕೊಪ್ಪಳ, ಬಾಗಲಕೋಟೆ 2, ರಾಯಚೂರು, ರಾಮನಗರ 1.

أحدث أقدم