ಬೆಂಗಳೂರು ಹಿಂದಿಕ್ಕಿ ದಕ್ಷಿಣ ಕನ್ನಡದಲ್ಲಿ ಕೊರೊನಾ ಏರಿಕೆ, ಇಲ್ಲಿದೆ ಜಿಲ್ಲಾವಾರು ವಿವರ, ಇಂದು ರಾಜ್ಯದಲ್ಲಿ 1875 ಪಾಸಿಟಿವ್

ಬೆಂಗಳೂರು ಹಿಂದಿಕ್ಕಿ ದಕ್ಷಿಣ ಕನ್ನಡದಲ್ಲಿ ಕೊರೊನಾ ಏರಿಕೆ, ಇಲ್ಲಿದೆ ಜಿಲ್ಲಾವಾರು ವಿವರ, ಇಂದು ರಾಜ್ಯದಲ್ಲಿ 1875 ಪಾಸಿಟಿವ್ 


ಬೆಂಗಳೂರು: ರಾಜ್ಯದಲ್ಲಿ ಇಂದು 1875 ಜನರಿಗೆ ಸೋಂಕು ತಗುಲಿದ್ದು, 25 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. 1502 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 24,144 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ದರ ಶೇಕಡ 1.20 ರಷ್ಟು ಇದೆ. ಒಟ್ಟು ಸೋಂಕಿತರ ಸಂಖ್ಯೆ 29,06,999 ಕ್ಕೆ ಏರಿಕೆಯಾಗಿದೆ. ಇದುವರೆಗೆ 28,46,244 ಜನ ಗುಣಮುಖರಾಗಿದ್ದು, 36,587 ಸೋಂಕಿತರು ಸಾವನ್ನಪ್ಪಿದ್ದಾರೆ.




ಜಿಲ್ಲೆಗಳ ವಿವರ:

ಬಾಗಲಕೋಟೆ 0, ಬಳ್ಳಾರಿ 13, ಬೆಳಗಾವಿ 39, ಬೆಂಗಳೂರು ಗ್ರಾಮಾಂತರ 37, ಬೆಂಗಳೂರು ನಗರ 409, ಬೀದರ್ 1, ಚಾಮರಾಜನಗರ 33, ಚಿಕ್ಕಬಳ್ಳಾಪುರ 23, ಚಿಕ್ಕಮಗಳೂರು 65, ಚಿತ್ರದುರ್ಗ 32, ದಕ್ಷಿಣಕನ್ನಡ 410, ದಾವಣಗೆರೆ 17, ಧಾರವಾಡ 23, ಗದಗ 12, ಹಾಸನ 108, ಹಾವೇರಿ 2, ಕಲಬುರ್ಗಿ 9, ಕೊಡಗು 83, ಕೋಲಾರ 35, ಕೊಪ್ಪಳ 1, ಮಂಡ್ಯ 42, ಮೈಸೂರು 146, ರಾಯಚೂರು 1, ರಾಮನಗರ 7, ಶಿವಮೊಗ್ಗ 65, ತುಮಕೂರು 52, ಉಡುಪಿ 162, ಉತ್ತರಕನ್ನಡ 46, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ.




ಕೇರಳದಲ್ಲಿ ಇಂದು 20,728 ಪಾಸಿಟಿವ್, ಟೆಸ್ಟ್ ಪಾಸಿಟಿವಿಟಿ 12.14%


ಕೇರಳದಲ್ಲಿ ಇಂದು 20,728 ಪಾಸಿಟಿವ್ ದೃಡಪಟ್ಟಿದೆ. ಕಳೆದ 24 ಗಂಟೆಯಲ್ಲಿ 1,70,690 ಸ್ಯಾಂಪಲ್‌ ಪರೀಕ್ಷೆ ಮಾಡಲಾಗಿದ್ದು ಟೆಸ್ಟ್ ಪಾಸಿಟಿವಿಟಿ 12.14% ಇದೆ. ಚಿಕಿತ್ಸೆಯಲ್ಲಿದ್ದ 17,792 ಮಂದಿ ಇಂದು ರೋಗ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು.


Read More

Previous Post Next Post