ರಾಜ್ಯದಲ್ಲಿ ಇಂದು 1,90,915 ಪರೀಕ್ಷೆ, 1259 ಪಾಸಿಟಿವ್, ಪಾಸಿಟಿವಿಟಿ ದರ ಶೇಕಡ 0.65

ರಾಜ್ಯದಲ್ಲಿ ಇಂದು 1,90,915 ಪರೀಕ್ಷೆ, 1259 ಪಾಸಿಟಿವ್, ಪಾಸಿಟಿವಿಟಿ ದರ ಶೇಕಡ 0.65 



ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1259 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 1701 ಜನ ಗುಣಮುಖರಾಗಿದ್ದಾರೆ. 29 ಸೋಂಕಿತರು ಸಾವನ್ನಪ್ಪಿದ್ದಾರೆ.


ಒಟ್ಟು ಸೋಂಕಿತರ ಸಂಖ್ಯೆ 29,41,026 ಏರಿಕೆಯಾಗಿದ್ದು, ಇದುವರೆಗೆ 28,84,032 ಜನ ಗುಣಮುಖರಾಗಿದ್ದಾರೆ. 37,184 ಜನ ಸಾವನ್ನಪ್ಪಿದ್ದಾರೆ.


ರಾಜ್ಯದಲ್ಲಿ 19,784 ಸಕ್ರಿಯ ಪ್ರಕರಣಗಳಿದ್ದು, ಇವತ್ತು 1,90,915 ಪರೀಕ್ಷೆ ನಡೆಸಲಾಗಿದೆ. ಪಾಸಿಟಿವಿಟಿ ದರ ಶೇಕಡ 0.65 ರಷ್ಟು ಇದೆ. ಬೆಂಗಳೂರಿನಲ್ಲಿ ಹೊಸದಾಗಿ 295 ಜನರಿಗೆ ಸೋಂಕು ತಗುಲಿದೆ. 371 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 11 ಮಂದಿ ಮೃತಪಟ್ಟಿದ್ದಾರೆ. 7582 ಸಕ್ರಿಯ ಪ್ರಕರಣಗಳು ಇವೆ.


ಜಿಲ್ಲಾವಾರು ಸೋಂಕಿತರ ವಿವರ:

ಬೆಂಗಳೂರು ನಗರ 295, ಚಿಕ್ಕಮಗಳೂರು 49, ದಕ್ಷಿಣ ಕನ್ನಡ 273, ಹಾಸನ 69, ಕೊಡಗು 38, ಮೈಸೂರು 102, ಶಿವಮೊಗ್ಗ 59, ತುಮಕೂರು 43, ಉಡುಪಿ 128, ಉತ್ತರಕನ್ನಡ 51 ಪ್ರಕರಣ ವರದಿಯಾಗಿವೆ.


ಯಾದಗಿರಿ 1, ವಿಜಯಪುರ 1, ರಾಮನಗರ 1, ರಾಯಚೂರು 4, ಕೊಪ್ಪಳ 7, ಕೋಲಾರ 7, ಹಾವೇರಿ 1, ಗದಗ 1, ಧಾರವಾಡ 3, ಚಿಕ್ಕಬಳ್ಳಾಪುರ 3, ಚಾಮರಾಜನಗರ 7, ಬೀದರ್ 0, ಬಳ್ಳಾರಿ 1, ಬಾಗಲಕೋಟೆ 3 ಪ್ರಕರಣ ವರದಿಯಾಗಿದೆ.



ಮುಂದೆ ಓದಿ

Previous Post Next Post