ಡಿಸಿಎಂ ಪಟ್ಟ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್, ಬೊಮ್ಮಾಯಿ ಸಂಪುಟದಲ್ಲಿ ಉಪಮುಖ್ಯಮಂತ್ರಿ ಸ್ಥಾನ ಇಲ್ಲ, ಇಂದು ಮಧ್ಯಾಹ್ನ 2.15 ಕ್ಕೆ ಸಂಪುಟ ರಚನೆಗೆ ಮುಹೂರ್ತ ಫಿಕ್ಸ್

ಡಿಸಿಎಂ ಪಟ್ಟ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್, ಬೊಮ್ಮಾಯಿ ಸಂಪುಟದಲ್ಲಿ ಉಪಮುಖ್ಯಮಂತ್ರಿ ಸ್ಥಾನ ಇಲ್ಲ, ಇಂದು ಮಧ್ಯಾಹ್ನ 2.15 ಕ್ಕೆ ಸಂಪುಟ ರಚನೆಗೆ ಮುಹೂರ್ತ ಫಿಕ್ಸ್  


ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ನೂತನ ಸಂಪುಟಕ್ಕೆ ಸೇರ್ಪಡೆಯಾಗಲಿರುವ ಸಚಿವರ ಪಟ್ಟಿಯನ್ನು ಪ್ರಕಟಿಸಿದ್ದಾರೆ. ನೂತನ ಸಚಿವರು ಅಪರಾಹ್ನ 2.15ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.


ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೇಲೆ ಉತ್ತರ ಕನ್ನಡ ಮತ್ತು ಉತ್ತರ ಕರ್ನಾಟಕ ಪ್ರವಾಸ ಹೋಗಿ ಪ್ರವಾಹ ಪೀಡಿತರಿಗೆ, ಭೂಕುಸಿತದಲ್ಲಿ ಮನೆ ಮಠ ಕಳೆದುಕೊಂಡವರಿಗೆ ಸ್ಥಳದಲ್ಲಿಯೇ ಪರಿಹಾರ ಪ್ರಕಟಿಸಿದ್ದೇನೆ, ಅದಕ್ಕೂ ಮೊದಲು ಮುಖ್ಯಮಂತ್ರಿಯಾದ ಕೂಡಲೇ ಸಚಿವ ಸಂಪುಟದಲ್ಲಿ ರೈತರ ಮಕ್ಕಳಿಗೆ 1ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಟ್ಟು ಶಿಷ್ಯ ವೇತನ ಯೋಜನೆಯನ್ನು ಪ್ರಕಟ ಮಾಡಿದ್ದೇವೆ.ನಮ್ಮ ಸಾಮಾಜಿಕ ಭದ್ರತೆ ಯೋಜನೆಯಡಿ ವೇತನವನ್ನು ಹೆಚ್ಚಿಸಿದ್ದೇವೆ ಎಂದರು.


ಇವತ್ತು ಬೆಳಿಗ್ಗೆ ನೂತನ ಸಚಿವರ ಪಟ್ಟಿ ಅಂತಿಮವಾಗಿದ್ದು, ಇಂದು 29 ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ, ಉಪ ಮುಖ್ಯಮಂತ್ರಿ ಹುದ್ದೆ ಇರುವುದಿಲ್ಲ ಎಂದು ಹೈಕಮಾಂಡ್ ತೀರ್ಮಾನಿಸಿದೆ. ರಾಜ್ಯದ ಏಳಿಗೆ, ಪ್ರದೇಶವಾರು, ಜಾತೀಯವಾರು ಸಮಾನತೆ ನೋಡಿಕೊಂಡು ಹಾಗೂ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೈಕಮಾಂಡ್ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಿದೆ ಎಂದರು.


ಇಂದು ಸುದ್ದಿಗೋಷ್ಠಿಯಲ್ಲಿ ಸಿಎಂ ಹೇಳಿದ್ದು: ನನ್ನ ನೂತನ ಮಂತ್ರಿ ಮಂಡಲ ವಿಸ್ತರಣೆಗೆ ದೆಹಲಿಗೆ ಹೋಗಿ ವರಿಷ್ಠರ ಜೊತೆ ಚರ್ಚೆ ನಡೆಸಿ ನಿನ್ನೆ ರಾತ್ರಿ ಅಂತಿಮ ಸುತ್ತಿನ ಮಾತುಕತೆಯಾಗಿ ಇಂದು ಬೆಳಗ್ಗೆ ಪಟ್ಟಿ ಅಂತಿಮವಾಯಿತು. ರಾಜ್ಯಪಾಲರ ಜೊತೆ ಮಾತನಾಡಿ ನೂತನ ಸಚಿವರ ಪಟ್ಟಿ ಕಳುಹಿಸಿದ್ದೇನೆ ಎಂದರು.


29 ಸಚಿವರು ಪ್ರಮಾಣವಚನ: ಇಂದು ಒಟ್ಟು 29 ಸಚಿವರು ಪ್ರಮಾಣ ವಚನ ತೆಗೆದುಕೊಳ್ಳುತ್ತಾರೆ, ಈ ಬಾರಿ ಉಪ ಮುಖ್ಯಮಂತ್ರಿ ಹುದ್ದೆ ಇರುವುದಿಲ್ಲ ಎಂದು ಹೈಕಮಾಂಡ್ ಸೂಚನೆ ನೀಡಿದೆ. ಮಂತ್ರಿ ಮಂಡಲದಲ್ಲಿ ಶಾಸಕರ ಅನುಭವ ಮತ್ತು ಹೊಸ ಶಕ್ತಿಯ ಸಮ್ಮಿಶ್ರಣದ ಸಚಿವ ಸಂಪುಟದಲ್ಲಿರುತ್ತದೆ ಎಂದರು.


ಈ ಬಾರಿ ಸಂಪುಟದಲ್ಲಿ 7 ಮಂದಿ ಒಬಿಸಿ, ಮೂರು ಮಂದಿ ಎಸ್ಸಿ, ಒಬ್ಬ ಎಸ್ ಟಿ ಶಾಸಕರಿಗೆ ಮಂತ್ರಿ ಸ್ಥಾನ ನೀಡಲಾಗುತ್ತಿದೆ. 7 ಮಂದಿ ಒಕ್ಕಲಿಗರು, 8 ಮಂದಿ ಲಿಂಗಾಯತರು, ಒಬ್ಬ ಮಹಿಳೆ, ಒಬ್ಬ ರೆಡ್ಡಿ ಸಮುದಾಯದವರು ಇರುತ್ತಾರೆ ಎಂದು ತಿಳಿದು ಬಂದಿದೆ.


ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಒಟ್ಟು 29 ಶಾಸಕರ ಅಧಿಕೃತ ಪಟ್ಟಿ ಇಲ್ಲಿದೆ

1.ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ

2.ಆರ್.ಅಶೋಕ್- ಪದ್ಮನಾಭ ನಗರ

3.ಬಿ.ಸಿ ಪಾಟೀಲ್ - ಹಿರೇಕೇರೂರು

4.ಡಾ.ಸಿ.ಎನ್.ಅಶ್ವತ್ಥ ನಾರಾಯಣ - ಮಲ್ಲೇಶ್ವರ

5.ಬಿ.ಶ್ರೀ ರಾಮುಲು- ಮೊಳಕಾಲುಮ್ಮೂರು

6.ಉಮೇಶ್ ಕತ್ತಿ- ಹುಕ್ಕೇರಿ

7.ಎಸ್.ಟಿ.ಸೋಮಶೇಖರ್- ಯಶವಂತಪುರ

8.ಡಾ.ಕೆ.ಸುಧಾಕರ್ - ಚಿಕ್ಕಬಳ್ಳಾಪುರ

9.ಬೈರತಿ‌ ಬಸವರಾಜ - ಕೆ ಆರ್ ಪುರಂ

10.ಮುರುಗೇಶ್ ನಿರಾಣಿ - ಬೀಳಗಿ

11.ಶಿವರಾಂ ಹೆಬ್ಬಾರ್- ಯಲ್ಲಾಪುರ

12.ಶಶಿಕಲಾ ಜೊಲ್ಲೆ- ನಿಪ್ಪಾಣಿ

13.ಕೆ.ಸಿ ನಾರಾಯಣ ಗೌಡ - ಕೆ‌ಆರ್ ಪೇಟೆ

14.ಸುನೀಲ್ ಕುಮಾರ್ - ಕಾರ್ಕಳ

15.ಅರಗ ಜ್ಞಾನೇಂದ್ರ - ತೀರ್ಥ ಹಳ್ಳಿ

16.ಗೋವಿಂದ ಕಾರಜೋಳ-ಮುಧೋಳ

17.ಮುನಿರತ್ನ- ಆರ್ ಆರ್ ನಗರ

18.ಎಂ.ಟಿ.ಬಿ ನಾಗರಾಜ್ - ಎಂ ಎಲ್ ಸಿ

19.ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್

20.ಜೆ.ಸಿ.ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ

21.ಹಾಲಪ್ಪ ಆಚಾರ್ - ಯಲಬುರ್ಗಾ

22.ಶಂಕರ್ ಪಾಟೀಲ್ ಮುನೇನಕೊಪ್ಪ - ನವಲುಗುಂದ

23.ಕೋಟಾ ಶ್ರೀನಿವಾಸ ಪೂಜಾರಿ - ಎಂ ಎಲ್ ಸಿ

24.ಪ್ರಭು ಚೌವ್ಹಾಣ್ - ಔರಾದ್

25.ವಿ ಸೋಮಣ್ಣ - ಗೋವಿಂದ ರಾಜನಗರ

26.ಎಸ್ ಅಂಗಾರ-ಸುಳ್ಯ

27.ಆನಂದ್ ಸಿಂಗ್ - ಹೊಸಪೇಟೆ

28. ಬಿಸಿ ನಾಗೇಶ್ - ತಿಪಟೂರು

29. ಸಿ .ಸಿ‌ ಪಾಟೀಲ್ - ನರಗುಂದ

Previous Post Next Post