ರಾಜ್ಯದಲ್ಲಿ ಕೊರೊನ ಇಳಿಮುಖ, ಇಂದು 973 ಪಾಸಿಟಿವ್, ಪಾಸಿಟಿವಿಟಿ ದರ 0.64 %
ವರದಿಗಳು ನೀಡಿರುವ ಅಂಕಿ-ಅಂಶಗಳ ಪ್ರಕಾರ 1324 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 2892517 ತಲುಪಿದೆ.
ಇನ್ನು ರಾಜ್ಯದಲ್ಲಿರುವ ಸಕ್ರಿಯ ಪ್ರಕರಣಗಳ ಸಂಖ್ಯೆ 18392 ಇದೆ. ಪಾಸಿಟಿವಿಟಿ ದರ 0.64 % ಹಾಗೂ ಡೆತ್ ರೇಟ್ 1.54 % ಇದೆ.
ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :
ಬಾಗಲಕೋಟೆ-0, ಬಳ್ಳಾರಿ-4, ಬೆಳಗಾವಿ-18, ಬೆಂಗಳೂರು ಗ್ರಾಮಾಂತರ-6, ಬೆಂಗಳೂರು ನಗರ-264, ಬೀದರ್-0, ಚಾಮರಾಜನಗರ-9, ಚಿಕ್ಕಬಳ್ಳಾಪುರ-1, ಚಿಕ್ಕಮಗಳೂರು-14, ಚಿತ್ರದುರ್ಗ-10, ದಕ್ಷಿಣ ಕನ್ನಡ-193, ದಾವಣಗೆರೆ-5, ಧಾರವಾಡ-6, ಗದಗ-1, ಹಾಸನ-74, ಹಾವೇರಿ-1, ಕಲಬುರಗಿ-1, ಕೊಡಗು-42, ಕೋಲಾರ-38, ಕೊಪ್ಪಳ-2, ಮಂಡ್ಯ-10, ರಾಯಚೂರು-0, ರಾಮನಗರ-4, ಶಿವಮೊಗ್ಗ-38, ತುಮಕೂರು-21, ಉಡುಪಿ-98, ಉತ್ತರ ಕನ್ನಡ-39, ವಿಜಯಪುರ-0, ಯಾದಗಿರಿ-1.