ಅಷ್ಟು ಕಾಮನ್ ಸೆನ್ಸ್ ಇಲ್ಲದೆ ಏನ್ರೀ ಮಾಡ್ತೀರಾ ನೀವು ಇಲ್ಲಿ?? ದ ಕ ಜಿಲ್ಲಾಧಿಕಾರಿ, ಆರೋಗ್ಯ ಅಧಿಕಾರಿಗಳ ಮೇಲೆ ಸಿಎಂ ಗರಂ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣ ಹಾಗೂ ನಿರ್ವಹಣೆ ಕುರಿತು ಗುರುವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಭೆಯಲ್ಲೇ ಜಿಲ್ಲಾಧಿಕಾರಿ ಮತ್ತು ಡಿಎಚ್ಒ ವಿರುದ್ಧ ಗರಂ ಆದರು. ಸಿಎಂ ಕೋಪ ಕಂಡು ಜಿಲ್ಲಾಧಿಕಾರಿ ಸುಮ್ಮನೆ ಕುಳಿತು ಬಿಟ್ಟರು!
ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತ ಮಾಡಿಕೊಂಡಿದ್ದ ಸಿದ್ಧತೆ ಕುರಿತು ಸಿಎಂಗೆ ಮಾಹಿತಿ ನೀಡುತ್ತಿದ್ದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರು 'ಮಾಸ್ಕ್ ಮತ್ತು ಗ್ಲೌಸ್ ಕೊರತೆ ಇದೆ' ಎಂದರು. ಇದಕ್ಕೆ ಸಿಟ್ಟಾದ ಸಿಎಂ, 'ಮಾಸ್ಕ್-ಗ್ಲೌಸ್ ಇಲ್ಲ ಇಲ್ಲದೆ ಹೇಗೆ ಆಡಳಿತ ನಡೆಸ್ತೀರಿ? ನಿಮ್ಮ ಬಳಿ ಎಸ್ಡಿಆರ್ಎಫ್ ಫಂಡ್ ಇದೆ, ಲೋಕಲ್ನಲ್ಲೇ ಖರೀದಿಸಿ. ನಿಮಗೆ ಹಣ ಕೊಟ್ಟರೂ ಏಕೆ ಇನ್ನೂ ಖರೀದಿಸಿಲ್ಲ?'
ಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಸಚಿವರಾದ ಎಸ್.ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಸುನೀಲ್ ಕುಮಾರ್, ಡಾ.ಕೆ. ಸುಧಾಕರ್, ಮೇಯರ್ ಪ್ರೇಮಾನಂದ ಶೆಟ್ಟಿ, ಶಾಸಕರಾದ ಯು.ಟಿ.ಖಾದರ್, ರಾಜೇಶ್ ನಾಯ್ಕ್, ವೇದವ್ಯಾಸ ಕಾಮತ್, ಉಮಾನಾಥ್ ಕೋಟ್ಯಾನ್, ಡಾ. ಭರತ್ ಶೆಟ್ಟಿ ವೈ, ಹರೀಶ್ ಪೂಂಜ, ಸಂಜೀವ ಮಠಂದೂರು, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಡಾ.ಪ್ರಜ್ಞಾ ಅಮ್ಮೆಂಬಳ ಉಪಸ್ಥಿತರಿದ್ದರು.