ಮೂರು ಜಿಲ್ಲೆಗಳಲ್ಲಿ ಶೂನ್ಯ, ರಾಜ್ಯದಲ್ಲಿ ಇಂದು 1950 ಗುಣಮುಖರು, 1857 ಪಾಸಿಟಿವ್

ಮೂರು ಜಿಲ್ಲೆಗಳಲ್ಲಿ ಶೂನ್ಯ, ರಾಜ್ಯದಲ್ಲಿ ಇಂದು 1950 ಗುಣಮುಖರು, 1857 ಪಾಸಿಟಿವ್

ಬೆಂಗಳೂರು : ರಾಜ್ಯದಲ್ಲಿ ಇಂದು ಕೊರೋನಾ ಸೋಂಕಿನ ಪ್ರಕರಣಗಳು ಮೂರು ಜಿಲ್ಲೆಗಳಲ್ಲಿ ಶೂನ್ಯವಾಗಿದೆ. ಹೀಗಿದ್ದೂ ಕೆಲ ಜಿಲ್ಲೆಗಳಲ್ಲಿ 10ಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾದ್ರೂ, 1,857 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ತಿಳಿದು ಬಂದಿದೆ.


ಈ ಕುರಿತಂತೆ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಬೀದರ್, ಕೊಪ್ಪಳ ಮತ್ತು ಯಾದಗಿರಿಯಲ್ಲಿ ಶೂನ್ಯ ಪ್ರಕರಣಗಳ ಸಂಖ್ಯೆ ವರದಿಯಾಗಿದೆ. ಬೆಂಗಳೂರು ನಗರದಲ್ಲಿ 321, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 475, ಉಡುಪಿ 191 ಸೇರಿದಂತೆ ರಾಜ್ಯಧ್ಯಂತ 1857 ಸೋಂಕಿನ ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿದೆ.


ಇಂದು 1950 ಸೋಂಕಿತರು ಗುಣಮುಖರಾಗಿದ್ದಾರೆ. ಹೀಗಾಗಿ 28,65,067 ಸೋಂಕಿತರು ಗುಣಮುಖರಾದಂತೆ ಆಗಿ, ರಾಜ್ಯದಲ್ಲಿ ಈಗ 22,728 ಸಕ್ರೀಯ ಸೋಂಕಿತರು ಇರುವುದಾಗಿ ತಿಳಿಸಿದೆ.


ಕೇರಳದಲ್ಲಿ ಇಂದು 21,445 ಪಾಸಿಟಿವ್, 20,723 ಗುಣಮುಖರು


ಕೇರಳದಲ್ಲಿ ಇಂದು 21,445 ಪಾಸಿಟಿವ್ ದೃಡಪಟ್ಟಿದೆ. ಕಳೆದ 24 ಗಂಟೆಯಲ್ಲಿ 1,45,582 ಸ್ಯಾಂಪಲ್‌ ಪರೀಕ್ಷೆ ಮಾಡಲಾಗಿದ್ದು ಟೆಸ್ಟ್ ಪಾಸಿಟಿವಿಟಿ 14.73% ಇದೆ. ಚಿಕಿತ್ಸೆಯಲ್ಲಿದ್ದ 20,723 ಮಂದಿ ಇಂದು ರೋಗ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು. ಇನ್ನು ರಾಜ್ಯದಲ್ಲಿ 1,76,518 ಸಕ್ರಿಯ ಪ್ರಕರಣಗಳು ಇವೆ.


Previous Post Next Post