ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿಯನ್ನು ನೀಡಿದ ಸಿಎಂ ಬಸವರಾಜ್ ಬೊಮ್ಮಾಯಿ
ಬೆಂಗಳೂರು : ರಾಜ್ಯದ ನೂತನ ಸಚಿವ ಸಂಪುಟ ರಚನೆಯಾಗುತ್ತಿದ್ದಂತೆ, ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿಯ ( District Incharge Minister ) ಜವಾಬ್ದಾರಿಯನ್ನು ವಹಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿನ ನೆರೆ, ಪ್ರವಾಹ, ಕೊರೋನಾ 3ನೇ ಅಲೆಯ ನಿಯಂತ್ರಣ ಜವಾಬ್ದಾರಿಯನ್ನು ನೀಡಿದ್ದಾರೆ.
ಈ ಕುರಿತಂತೆ ಪಟ್ಟಿಯನ್ನು ಬಿಡುಗಡೆ ಮಾಡಿರುವಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರಾಜ್ಯದಲ್ಲಿ ಕೋವಿಡ್-19 ನಿರ್ವಹಣೆ ಹಾಗೂ ನೆರೆ ಹಾವಳಿ ಪರಿಹಾರ ಕೆಲಸಗಳನ್ನು ತ್ವರಿತವಾಗಿ ಪರಿಶೀಲನೆ ಮಾಡಲು, ಈ ಕೆಳಕಂಡ ಸಚಿವರುಗಳನ್ನು ಅವರ ಹೆಸರಿನ ಮುಂದೆ ಸೂಚಿಸಿರುವ ಜಿಲ್ಲೆಗಳಿಗೆ, ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.
ಹೀಗಿದೆ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ (Karnataka District Incharge Minister List )
- ಗೋವಿಂದ ಕಾರಜೋಳ - ಬೆಳಗಾವಿ
- ಕೆ.ಎಸ್.ಈಶ್ವರಪ್ಪ - ಶಿವಮೊಗ್ಗ
- ಆರ್.ಅಶೋಕ್ - ಬೆಂಗಳೂರು ನಗರ
- ಬಿ.ಶ್ರೀರಾಮುಲು - ಚಿತ್ರದುರ್ಗ
- ವಿ.ಸೋಮಣ್ಣ - ರಾಯಚೂರು
- ಉಮೇಶ್ ಕತ್ತಿ - ಬಾಗಲಕೋಟೆ
- ಎಸ್ ಅಂಗಾರ - ದಕ್ಷಿಣ ಕನ್ನಡ
- ಜೆಸಿ ಮಾಧುಸ್ವಾಮಿ - ತುಮಕೂರು
- ಅರಗ ಜ್ಞಾನೇಂದ್ರ - ಚಿಕ್ಕಮಗಳೂರು
- ಡಾ.ಸಿಎನ್.ಅಶ್ವತ್ಥನಾರಾಯಣ - ರಾಮನಗರ
- ಸಿಸಿ ಪಾಟೀಲ್ - ಗದಗ
- ಆನಂದ್ ಸಿಂಗ್ - ವಿಜಯನಗರ ಮತ್ತು ಬಳ್ಳಾರಿ
- ಕೋಟಾ ಶ್ರೀನಿವಾಸ ಪೂಜಾರಿ - ಕೊಡಗು
- ಪ್ರಭು ಚೌಹಾಣ್ - ಬೀದರ್
- ಮರುಗೇಶ್ ನಿರಾಣಿ - ಕಲಬುರ್ಗಿ
- ಶಿವರಾಂ ಹೆಬ್ಬಾರ್ - ಉತ್ತರ ಕನ್ನಡ
- ಎಸ್.ಟಿ.ಸೋಮಶೇಖರ್ - ಮೈಸೂರು ಮತ್ತು ಚಾಮರಾಜನಗರ
- ಬಿ.ಸಿ ಪಾಟೀಲ್ - ಹಾವೇರಿ
- ಬೈರತಿ ಬಸವರಾಜು - ದಾವಣಗೆರೆ
- ಡಾ.ಕೆ.ಸುಧಾಕರ್ - ಚಿಕ್ಕಬಳ್ಳಾಪುರ
- ಕೆ.ಗೋಪಾಲಯ್ಯ - ಹಾಸನ
- ಶಶಿಕಲಾ ಜೊಲ್ಲೆ - ವಿಜಯಪುರ
- MTB ನಾಗರಾಜು - ಬೆಂಗಳೂರು ಗ್ರಾಮಾಂತರ
- ಕೆಸಿ ನಾರಾಯಣ್ ಗೌಡ - ಮಂಡ್ಯ
- ಬಿಸಿ ನಾಗೇಶ್ - ಯಾದಗಿರಿ
- ಸುನೀಲ್ ಕುಮಾರ್ - ಉಡುಪಿ
- ಹಾಲಪ್ಪ ಆಚಾರ್ - ಕೊಪ್ಪಳ
- ಶಂಕರ್ ಪಾಟೀಲ್ ಮುನೇನಕೊಪ್ಪ - ಧಾರವಾಡ
- ವಿ.ಮುನಿರತ್ನ - ಕೋಲಾರ